ನೆಟ್ಟಣ: ಟಾಟಾ ಏಸ್ ಡಿಕ್ಕಿ-ಪಾದಚಾರಿಗೆ ಗಾಯ

0

ಬಿಳಿನೆಲೆ: ರಸ್ತೆ ದಾಟುತ್ತಿದ್ದ ವೇಳೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ಫೆ.22ರಂದು ಸಂಜೆ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿ ನಡೆದಿದೆ.

ಬಿಳಿನೆಲೆ ಗ್ರಾಮದ ವಾಲ್ತಾಜೆ ನಿವಾಸಿ ಬಾಲಕೃಷ್ಣ (49ವ.) ಗಾಯಗೊಂಡವರಾಗಿದ್ದಾರೆ. ಬಾಲಕೃಷ್ಣ ಹಾಗೂ ಅವರ ಪತ್ನಿ ಚಂದ್ರಾವತಿಯವರು ನೆಟ್ಟಣ ಪೇಟೆಗೆ ಬಂದವರು ದಿನಸಿ ಸಾಮಾನು ಖರೀದಿಸಿ ವಾಪಾಸು ವಾಲ್ತಾಜೆ ಮನೆಯ ಕಡೆಗೆ ಹೋಗಲೆಂದು ಬಾಲಕೃಷ್ಣರವರು ನೆಟ್ಟಣ ಪೇಟೆಯ ಅಭಯ ಗಾರ್ಮೆಂಟ್ ಎದುರುಗಡೆ ರಸ್ತೆ ದಾಟುತ್ತಿರುವ ಸಂದರ್ಭ ಕಡಬ ಕಡೆಯಿಂದ ಬಂದ ಟಾಟಾ ಏಸ್(ಕೆಎ 12 ಸಿ 0586) ವಾಹನ ಡಿಕ್ಕಿಯಾಗಿದೆ.

ಟಾಟಾ ಏಸ್ ಚಾಲಕ ನವೀನ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿ ರಸ್ತೆ ದಾಟುತ್ತಿದ್ದ ಬಾಲಕೃಷ್ಣರವರಿಗೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಡಿಕ್ಕಿಯಿಂದಾಗಿ ಬಾಲಕೃಷ್ಣರವರು ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಸ್ಥಳೀಯರಾದ ಪ್ರಕಾಶ, ಪ್ರಸಾದ ಹಾಗೂ ಇತರರು ಖಾಸಗಿ ವಾಹನದಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್‌ನಲ್ಲಿ ಪುತ್ತೂರು ಸಕರಾರಿ ಆಸ್ಪತ್ರೆಗೆ ಕರೆ ತಂದು ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಬಗ್ಗೆ ಗಾಯಾಳು ಬಾಲಕೃಷ್ಣ ಅವರ ಪತ್ನಿ ಚಂದ್ರಾವತಿ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 279,337 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here