ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನದಲ್ಲಿ ಶ್ರೀ ಧರ್ಮರಸು ಉಳ್ಳಾಕುಲು,ಪಿಲಿಭೂತ, ಕುಕ್ಕುಳ ಪಂಜುರ್ಲಿ ದೈವಗಳ ನೇಮೋತ್ಸವ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನವು ಜೀರ್ಣೋದ್ದಾರಗೊಂಡು, ಫೆ.೨೧ ರಿಂದ ೨೩ರತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು. ಫೆ. ೨೩ ರಂದು ಬೆಳಿಗ್ಗೆ ಶ್ರೀ ಧರ್ಮರಸು ಉಳ್ಲಾಕುಲು ಮಧ್ಯಾಹ್ನ ಪಿಲಿಭೂತ ಹಾಗೂ ಸಂಜೆ ಕುಕ್ಕುಳ ಪಂಜುರ್ಲಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.


ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಿತು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ ಅಧ್ಯಕ್ಷ ಜಯರಾಮ ರೈ, ದೈವಸ್ಥಾನದ ಸ್ಥಳದಾನಿ ದಯಾನಂದ ನಾಯಕ್ ಬೆಂಗಳೂರು, ಪುಣ್ಚಪ್ಪಾಡಿ ತಳಮನೆಯ ಯಾಜಮಾನ ಬಾಲಕೃಷ್ಣ ರೈ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಎನ್.ಸುಂದರ ರೈ ನಡುಮನೆ, ರವೀಂದ್ರ ರೈ ಇಳಂತಾಜೆ, ಪಿ.ಡಿ.ಗಂಗಾಧರ್ ರೈ ದೇವಸ್ಯ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ಪ್ರಸನ್ನ ರೈ ನೆಕ್ಕರೆ, ಕಾರ್ಯದರ್ಶಿ ಹರೀಶ್ ಪಿ.ತೋಟದಡ್ಕ, ಉಪಕಾರ್‍ಯದರ್ಶಿ ರಾಮ್‌ಮೋಹನ್ ರೈ ಕಲಾಯಿ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಗೌರವ ಸಲಹೆಗಾರರಾದ ಕೇಶವ ಕಲ್ಲೂರಾಯ ಬಂಬಿಲ, ಜಯಲಕ್ಷ್ಮೀ ಕೆ.ಎಸ್.ಎನ್.ನಿಡ್ವಣ್ಣಾಯ ಕುಮಾರಮಂಗಲ, ಪದ್ಮಾಕ್ಷಿ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಸಂಕಪ್ಪ ರೈ ಕಲಾಯಿ, ಬಾಲಕೃಷ್ಣ ರೈ ದೇವಸ್ಯ, ರಾಜೇಶ್ ನಾಯಕ್ ಬೆಂಗಳೂರು, ಕುಶಲ ಪಿ.ರೈ ಪುಣ್ಚಪ್ಪಾಡಿ, ಮಹಾಬಲ ಶೆಟ್ಟಿ ಕೊಮ್ಮಂಡ, ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಉಪಾಧ್ಯಕ್ಷ ರಾಜಾರಾಮ್ ರೈ ಪುಣ್ಚಪ್ಪಾಡಿ, ಕಾರ್‍ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಸದಸ್ಯರುಗಳಾದ ರಾಮ್‌ಮೋಹನ್ ರೈ ಕಲಾಯಿ, ವಿಶ್ವನಾಥ ಮಡಿವಾಳ ಪುಣ್ಚಪ್ಪಾಡಿ, ನಾಗೇಶ್ ಬದಿಯಡ್ಕ, ಮಾಧವ ಗೌಡ ಬೆದ್ರಂಪಾಡಿ, ಕುಂಞ ಓಡಂತರ್ಯ ಸಹಿತ ಸಾವಿರಾರು ಮಂದಿ ಭಾಗವಹಿಸಿದರು.

ಎಲ್ಲರ ಸಹಕಾರದಿಂದ ಯಶಸ್ವಿ ಕಾರ್‍ಯಕ್ರಮ

ಮೂರು ದಿನಗಳ ಕಾಲ ನಡೆದ ದೈವಸ್ಥಾನದ ಬ್ರಹ್ಮಕಲಶೋತ್ಸವ, ನೇಮೋತ್ಸವ ಎಲ್ಲರ ಸಹಕಾರ,ಪ್ರೋತ್ಸಾಹದಿಂದ ಯಶಸ್ವಿ ಕಾರ್‍ಯಕ್ರಮವಾಗಿ ಹತ್ತೂರಲ್ಲಿ ಹೆಸರನ್ನು ಪಡೆದಿರುವುದು ತುಂಬಾ ಸಂತೋಷ ತಂದಿದೆ.
ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ- ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ


ಎಲ್ಲರ ಸಹಕಾರಕ್ಕೆ ಕೃತಜ್ಞತೆಗಳು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಮುಂದೆಯೂ ತಮ್ಮ ಸಹಕಾರ ಅಗತ್ಯ
ಜಯರಾಮ ರೈ-ಅಧ್ಯಕ್ಷರು ಶ್ರೇಯೋಭಿವೃದ್ಧಿ ಟ್ರಸ್ಟ್


ಬ್ರಹ್ಮಕಲಶೋತ್ಸವ ಊರಿಗೆ ಸಂಭ್ರಮ ತಂದಿದೆ
ದೈವಸ್ಥಾನದ ಬ್ರಹ್ಮಕಲಶೋತ್ಸವ ಊರಿಗೆ ಸಂಭ್ರಮ, ಸಂತೋಷವನ್ನು ತಂದಿದೆ. ದೈವಸ್ಥಾನದ ಜೀರ್ಣೋದ್ದಾರ ಒಂದು ವರ್ಷದಲ್ಲಿ ಪೂರ್ಣಗೊಂಡಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ
ಹರೀಶ್ ಪಿ.ತೋಟದಡ್ಕ ಕಾರ್‍ಯದರ್ಶಿ ಜೀರ್ಣೋದ್ದಾರ ಸಮಿತಿ


ಎಲ್ಲರಿಗೂ ದೈವದ ಅನುಗ್ರಹ
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದಲ್ಲಿ ದುಡಿದ ಎಲ್ಲರಿಗೂ ದೈವದ ಅನುಗ್ರಹ ಇದೆ. ಊರ-ಪರವೂರ ಭಕ್ತರು ಮೆಚ್ಚಿಗೆ ವ್ಯಕ್ತಪಡಿಸಿದ ಬ್ರಹ್ಮಕಲಶೋತ್ಸವ ಆಗಿದೆ
ಗಿರಿಶಂಕರ್ ಸುಲಾಯ ದೇವಸ್ಯ ಕಾರ್‍ಯದರ್ಶಿ, ಶ್ರೇಯೋಭಿವೃದ್ಧಿ ಟ್ರಸ್ಟ್

LEAVE A REPLY

Please enter your comment!
Please enter your name here