ಕಲಾವಿದರು, ಪೋಷಕರು, ಕಲಾಭಿಮಾನಿಗಳಿಂದ ಕಲೆ ಜೀವಂತ – ಡಾ. ಎಂ. ಚಕ್ರಪಾಣಿ

ಪುತ್ತೂರು: ಕಳೆದ 18 ವರ್ಷಗಳಿಂದ ನಿರಂತರವಾಗಿ ಅಂತರಾಷ್ಟ್ರೀಯ ಕಲಾವಿದರಿದಂದ ಭಾರತೀಯ ವೈವಿಧ್ಯಮಯ ಕಲೆಗಳ ರಸದೌತಣವನ್ನು ನೀಡುತ್ತಿರುವ ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನಿಂದ ಮೂರು ದಿನಗಳು ನಡೆಯುವ 19ನೇ ವರ್ಷದ ಕಲೋಪಾಸನಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಫೆ.25ರಂದು ಚಾಲನೆ ನೀಡಲಾಯಿತು.

ಮಂಗಳೂರು ಕಸ್ತೂರಭ ಮೆಡಿಕಲ್ ಕಾಲೇಜಿನ ಪ್ರೊ.ಆಫ್ ಮೆಡಿಸಿನ್ ಇದರ ಎಂ.ಡಿ ಡಾ. ಎಂ. ಚಕ್ರಪಾಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಕಲೆಯು ಜೀವಂತವಾಗಿರಲು ಉನ್ನತ ಕಲಾವಿದರು, ಪೋಷಕರು, ಕಲಾಭಿಮಾನಿಗಳು ಮುಖ್ಯ. ಇವರೆಲ್ಲ ಸೇರಿದಾಗ ಕಲೋತ್ಸವ ಉತ್ತುಂಗಕ್ಕೇರುತ್ತದೆ. ಪ್ರತಿ ವರ್ಷ ಇಲ್ಲಿ ಕಲೋಪಾಸನಾ ಕಾರ್ಯಕ್ರಮ ನಡೆಯುತ್ತಾ ಇದೆ.ಕಾರ್ಯಕ್ರಮ ನಡೆಸುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಉನ್ನತ ಮಟ್ಟದ ಕಲಾವಿದರನ್ನು ಪುತ್ತೂರಿಗೆ ಕಳೆದ 2 ದಶಕದಿಂದ ಪರಿಚಯಿಸುತ್ತಿರುವ ಡಾ.ಹರಿಕೃಷ್ಣ ಪಾಣಾಜೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮ ನಿರಂತರವಾಗಿ ಇಲ್ಲಿ ನಡೆಯಲಿ ಎಂದು ಹಾರೈಸಿದರು‌.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖ, ಪುತ್ರಿ ಮೇಘನಾ ಅತಿಥಿ ಮತ್ತು ಕಲಾವಿದರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಸುಜಾತ, ಡಾ.ಗೋಪಾಲ್ ಪಣಿಕರ್ ದಂಪತಿ ಉಪಸ್ಥಿತರಿದ್ದರು.

ಪುತ್ತೂರಿಗೆ ಮೊದಲ ಭಾರಿ ಆಗಮಿಸಿದ ವಿದುಷಿ ಸುಧಾ ರಘುನಾಥನ್:

ಸರಳ ಸಭಾ ಕಾರ್ಯಕ್ರಮದ ಬಳಿಕ ಪುತ್ತೂರಿಗೆ ಮೊದಲ ಭಾರಿ ಆಗಮಿಸಲಿರುವ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಿದುಷಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ವಿದ್ವಾನ್ ಎಂಬಾರ್ ಕಣ್ಣನ್, ಮೃದಂಗದಲ್ಲಿ ವಿದ್ವಾನ್ ನೈವೇಲಿ ಎಸ್ ಸ್ಕಂದಸುಬ್ರಹ್ಮನ್, ಘಟಂನಲ್ಲಿ ವಿದ್ವಾನ್ ಆರ್ ರಮಣ್ ಅವರು ಸಹಕರಿಸಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮಾಧವ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here