ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವ – ಸನಾತನ ಹಿಂದು ಧರ್ಮದ ಪರಂಪರೆ ಉಳಿಸಿ, ಬೆಳೆಸುವಲ್ಲಿ ಧಾರ್ಮಿಕ ಶಿಕ್ಷಣ ಮಹತ್ವ – ಶ್ರೀವತ್ಸ ಕೆದಿಲಾಯ

0

ಪುತ್ತೂರು: ಸಂಸ್ಕಾರಗಳು ಎಳೆಯ ವಯಸ್ಸಿನಲ್ಲೇ ಬೆರೆತಾದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಸನಾತನ ಹಿಂದು ಧರ್ಮದ ಪರಂಪರೆ ಉಳಿಸಿ, ಬೆಳೆಸುವಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ವೇ ಮೂ ಶ್ರೀವತ್ಸ ಕೆದಿಲಾಯ ಅವರು ಹೇಳಿದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆಯುತ್ತಿರುವ 3ನೇ ಧಾರ್ಮಿಕ ಶಿಕ್ಷಣ ಕೇಂದ್ರವಾದ ಕೊಂಬೆಟ್ಟು ಅಟಲ್ ಉದ್ಯಾನದ ಪ್ರಥಮ ವರ್ಷದ ವಾರ್ಷಿಕೋತ್ಸವವು ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಫೆ.25ರಂದು ಸಂಜೆ ನಡೆಯಿತು. ಮಾಜಿ ಪುರಸಭಾ ಅಧ್ಯಕ್ಷೆ ಟಿ.ಪ್ರೇಮಲತಾ ರಾವ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಸಮಿತಿಯ ಸದಸ್ಯರುಗಳಾದ ರಾಮಚಂದ್ರ ಕಾಮತ್, ವೀಣಾ ಬಿ.ಕೆ , ಧಾರ್ಮಿಕ ಸಂಯೋಜಕರಾದ ಸತೀಶ್ ಭಟ್ ಆಗಮಿಸಿ ಸಂದರ್ಭೋಚಿತವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ವೇ ಮೂ ಶ್ರೀವತ್ಸ ಕೆದಿಲಾಯರು ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು. ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ಪುಟಾಣಿಗಳಿಂದ, ಶ್ಲೋಕ ವಾಚನ, ಭಗವದ್ಗೀತೆ ಶ್ಲೋಕ ವಾಚನ, ಮಂಕತಿಮ್ಮನ ಕಗ್ಗ ವಾಚನ, ಕುಣಿತ ಭಜನೆ ಹಾಗೂ ಪೆಬ್ರವರಿ ತಿಂಗಳಲ್ಲಿ ಜನಿಸಿದ ಮಕ್ಕಳ ಜನ್ಮ ದಿನಾಚರಣೆಯನ್ನು ಹಿಂದೂ ಸಂಸ್ಕöÈತಿ ಪ್ರಕಾರ ಆಚರಿಸಲಾಯಿತು. ಕು.ಧ್ವನಿ ಹೆಗ್ಡೆ ಸ್ವಾಗತಿಸಿ, ಕು.ಚಿನ್ಮಯೀ ವಂದಿಸಿದರು. ಈಶ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವತ್ಸಲಾ ರಾಜ್ಞಿ, ಪ್ರಭಾವತಿ, ವಿದ್ಯಾ ಜೆ ರಾವ್, ಧಾರ್ಮಿಕ ಮುಖಂಡರಾದ ಎಸ್ ಅಪ್ಪಯ್ಯ ಮಣಿಯಾಣಿ, ಮಾಜಿ ಪುರಸಭಾ ಸದಸ್ಯೆ ಜ್ಯೋತಿ ಆರ್ ನಾಯಕ್, ಭಜನಾ ಸಮಿತಿಯ, ಸ್ಮಿತಾ ಬಾಳಿಗ, ವೀಣಾ, ರಾಧಾ, ಸುನೀತಾ, ಪ್ರೇಮಾ, ಶೋಭಾ, ಸ್ಥಳೀಯರಾದ ಗಣೇಶ್ ಬಾಳಿಗ, ಗಣೇಶ ಆಚಾರ್ಯ ಬನ್ನೂರು, ಚೇತನಾ ಹೆಗ್ಡೆ, ವಿನಯ ಬಾಳಿಗ, ಶಾಂತರಾಮ ಕಾಮತ್,ಹಾಗೂ ಮಕ್ಕಳ ಪೋಷಕರು ಪಟಾಣಿಗಳು. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here