ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ವಾಗಿ ನಿರ್ಮಾಣ ಗೊಂಡ ಅನ್ನ ಛತ್ರವನ್ನು ಶಾಸಕ ಸಂಜೀವ ಮಠಂದೂರುರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಸೂಕ್ತ ಸೌಲಭ್ಯ ಗಳನ್ನು ಒದಗಿಸಿದಾಗ ದೇವರು ಸಂತುಷ್ಠನಾಗುತ್ತಾನೆ. ಇಲ್ಲಿ ಇಂತಹ ಕೆಲಸ ಗಳು ಆಗುತ್ತಿರುವುದು ಸಂತಸದ ವಿಚಾರ ಎಂದು ದೇವಸ್ಥಾನದ ಆಡಳಿತ ಮಂಡಳಿ ಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಲೋಕೇಶ ಹೆಗ್ಡೆ,ಪ್ರಕಾರ್ಯದರ್ಶಿ ದಿನಕರಗೌಡ ಬುಡ್ಲೆಗುತ್ತು, ಗಣೇಶ ಕರ್ಮಲ, ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಮಲ, ಕಾರ್ಯದರ್ಶಿ ಚಂದ್ರಯ್ಯ, ಉಪಾಧ್ಯಕ್ಷ ಮಹಾಲಿಂಗ ಪಾಟಾಳಿ,ತಾರನಾಥ, ಧರ್ಮದರ್ಶಿ ರಾಜಣ್ಣ, ದಿನೇಶ್ ಕರ್ಮಲ, ಗಣೇಶ , ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here