ಪಡುಮಲೆ ಬ್ರಹ್ಮಕಲಶೋತ್ಸವ ಸಂಭ್ರಮ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಫೆ.26 ರಂದು  ಪೂರ್ವಾಹ್ನ ಗಂ 6 ರಿಂದ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಚತುಃಶುದ್ಧಿಧಾರ,ಅವಾಗಹ,ಪಂಚಕ,ಅಂಕುರ ಪೂಜೆ ನಡೆಯಿತು.

ಅಪರಾಹ್ನ 12 ರಿಂದ ಅಂಕುರ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕ ಮಹಾಲಿಂಗ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ  ಶ್ರೀನಿವಾಸ ಭಟ್ ಚಂದುಕೂಡ್ಲು, ಗೌರವಾಧ್ಯಕ್ಷ   ಬಲರಾಜ್ ಶೆಟ್ಟಿ ನಿಟ್ಟೆಗುತ್ತು ಪೇರಾಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮನೋಹರ, ಬ್ರಹ್ಮಕಲಶೋತ್ಸವ ಅರ್ಥಿಕ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಬಿ., ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಪಡ್ಪು, ಕಾರ್ಯಾಲಯ ಮುಖ್ಯಸ್ಥ ರಾಮಣ್ಣ ಗೌಡ ಕೆ., ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಆಳ್ವ ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಅಪ್ಪಯ್ಯ ನಾಯ್ಕ, ತಿಲೋತ್ತಮಾ, ಸುಮಿತ್ರಾ  ರಾಜೇಶ್ ಸುಳ್ಯಪದವು, ಪ್ರಮುಖರಾದ  ಶಿವಪ್ರಸಾದ್ ಭಟ್ ಪಟ್ಟೆ, ವೇಣುಗೋಪಾಲ್ ಭಟ್,  ನಾರಾಯಣ ಭಟ್  ಆರೋಗ್ಯ ಸಮಿತಿ ಸಂಚಾಲಕ ಡಾ ರಾಜೇಶ್ ಪಟ್ಟೆ, ,   ಶಿವಶಂಕರ ಕನ್ನಡ್ಕ,  ಪ್ರಗತಿ ಪರ ಕೃಷಿ ಕ  ಜಯಂತ ರೈ ಕುದ್ಕಾಡಿ,  ಸತೀಶ್ ರೈ ಕಟ್ಟಾವು   ಶ್ರೀನಿವಾಸ ಗೌಡ ಕನ್ನಯ, ಜನಾರ್ದನ ಪೂಜಾರಿ ಪದಡ್ಕ,ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ  ರಾಜಗೋಪಾಲ್ ಭಟ್, ನಿವೃತ್ತ ಮುಖ್ಯ ಸಿಕ್ಷಕ ವೈ ಕೆ ನಾಯ್ಕ ಪಟ್ಟೆ, ಬ್ರಹ್ಮಕಲಶೋತ್ವವ  ಸಲಹೆಗಾರರಾದ    ನಿವೃತ್ತ ಮುಖ್ಯ ಶಿಕ್ಷಕರಾದ  ಜಿ.ಪಿ ವೆಮಕಟ ರಾವ್,  ನಾರಾಯಣ ನಾಯ್ಕ, ಚಿನ್ನಪ್ಪ ಗೌಡ, ಗಂಗಾಧರ ರೈ ಎಂ.ಜಿ,  ವೈದಿಕ ಸಮಿತಿ ಸಂಚಾಲಕ ವೆಂಕಟೇಶ ಭಟ್, ಪಾಕಶಾಲೆ ಸಂಚಾಲಕ ಸುಬ್ರಹ್ಮಣ್ಯ ಭಟ್ ಇಂದಾಜೆ,  ಹಾಗೂ ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.

ಭಜನಾ ಕಾರ್ಯಕ್ರಮ

ಪೂರ್ವಾಹ್ನ ಗಂ 8.3೦ ರಿಂದ ಶ್ರೀ ಕ್ಷೇತ್ರದಲ್ಲಿ  ಅಲಂತಡ್ಕ ಶ್ರೀ ವನಶಾಸ್ತಾರ ಮಕ್ಕಳ ಕುಣಿತ ಭಜನಾ ತಂಡದ ಸದಸ್ಯರಿಂದ ಹಾಗೂ ನಿಡ್ಪಳ್ಲಿ ಶ್ರೀ ಶಾಂತದುರ್ಗಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ  ನಿರ್ವಹಣೆಯನ್ನು ಭಜನಾ ಸಮಿತಿ ಸಂಚಾಲಕ ಸುಬ್ಬಯ್ಯ ರೈ ಹಲಸಿನಡಿ ನಿರ್ವಹಿಸಿದರು.

ಸಾಂಸ್ಕೃತಿಕ  ಕಾರ್ಯಕ್ರಮ

ಸಾಂಸ್ಕೃತಿಕ  ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ 1೦.3೦  ರಿಂದ  ದ.ಕ.ಜಿ.ಪಂ ಉ ಹಿ.ಪ್ರಾ. ಶಾಲೆ ಬಡಗನ್ನೂರು ಹಾಗೂ ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.

ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಗಳ ಶಿಕ್ಷಕಿ ಪ್ರಶಾಂತಿ ಸುಖೇಶ್ ರೈ ಬಳಗದವರು ನಿರ್ವಹಿಸಿದರು.

ಅಪರಾಹ್ನ 1.30 ರಿಂದ ಶ್ರೀಮತಿ ಸುಚಿತ್ರಾ ಬಾಲಕೃಷ್ಣ ಅನುಗ್ರಹ ನಾಟ್ಯಾಲಯ ಕಾಸರಗೋಡು ಇದರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಅಪರಾಹ್ನ 3 ರಿಂದ ಶ್ರೀ ಧೀಶಕ್ಕಿ ಮಹಿಳಾ ಯಕ್ಷಬಳಗ ಪುತ್ತೂರು ಇದರ ಸದಸ್ಯರಿಂದ ಸಮರ ಸೌಗಂಧಿಕಾ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ರಾತ್ರಿ ಪುತ್ತೂರು ಪಾಂಚಜನ್ಯ ಯಕ್ಷ ಕಲಾವೃಂದ ಯುವ ಕಲಾವಿದರಿಂದ ಮೋಕ್ಷ ಸಂಗ್ರಾಮ  ಯಕ್ಷಗಾನ ಬಯಲಾಟ ನಡೆಯಿತು.

ಫೆ.27ರಂದು
ಫೆ. 27 ರಂದು  ಗಣಪತಿ ಹೋಮ, ಶಾಂತಿ,ಅದ್ಬುತ ಶಾಂತಿ,  ಸ್ವಶಾಂತಿ,ಚೋರಶಾಂತಿ ಹೋಮಗಳು, ದಪನ ಪ್ರಾಯಶ್ಚಿತ್ತ, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಧ್ಯಾಹ್ನ ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ,ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

ಬೆಳಗ್ಗೆ ಗಂ 8.3೦ ರಿಂದ ಭಜನಾ ಕಾರ್ಯಕ್ರಮ, 
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ 9.30 ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ತಾಳಮದ್ದಳೆ, ಮಧ್ಯಾಹ್ನ 1.30 ರಿಂದ ವಿನಯಶ್ರೀ ಬಬ್ಲಿ ಕಜಮೂಲೆ ಇವರಿಂದ  ಸಂಗೀತ ಕಛೇರಿ, ರಾತ್ರಿ ಗಂ  7 ರಿಂದ ಶ್ರೀ ದೀಪಕ್ ರೈ ಪಾಣಜೆ  ನಿರ್ದೇಶನದಲ್ಲಿ   ” ನಿತ್ಯೆ ಬನ್ನಗ  ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

LEAVE A REPLY

Please enter your comment!
Please enter your name here