ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎಂ ಎಸ್ ಡಬ್ಲ್ಯೂ (ಸ್ನಾತಕೋತ್ತರ ಸಮಾಜ ಕಾರ್ಯ) ವಿಭಾಗ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಹಂಟ್ಯಾರು ಇದರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕರಕುಶಲ ತರಬೇತಿಯನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಹಂಟ್ಯಾರುನಲ್ಲಿ ಆಯೋಜಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ಬಾಬು ಎಂ ಮರಿಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಇದರ ಮುಖ್ಯೋಪಾಧ್ಯಾಯಿನಿ ಮೋಹಿನಿ ಮತ್ತು ಸರಕಾರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಂಟ್ಯಾರಿನ ಹಿರಿಯ ಶಿಕ್ಷಕಿ ಸಾವಿತ್ರಿ ಎನ್ , ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಸಂತ ಫಿಲೋಮಿನ ಕಾಲೇಜು ಪುತ್ತೂರಿನ ಉಪನ್ಯಾಸಕಿ ಪ್ರತಿಭಾ.ಕೆ ಕಾರ್ಯಕ್ರಮ ಉದ್ದೇಶಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಫಿಲೋಮಿನಾ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿಭಾಗದ ಪ್ರಥಮ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ನವ್ಯಶ್ರೀ ಪಿ ಜಿ ತರಬೇತಿಯನ್ನು ನೀಡಿದರು.
ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಹರೀಷ್ಮಾ ಸ್ವಾಗತಿಸಿ ಮತ್ತು ಅಖಿಲ್ ವಂದಿಸಿ, ವೈಷ್ಣವಿ ಎಂ ಆರ್ ಕಾರ್ಯಕ್ರಮ ನಿರೂಪಿಸಿದರು.