ಯೂನಿಯನ್ ಬ್ಯಾಂಕ್ ನೆಲ್ಯಾಡಿ ಶಾಖೆಯ ಸ್ಪೆಷಲ್ ಅಸಿಸ್ಟೆಂಟ್ ಕೆ.ವಾಮನ ನಿವೃತ್ತಿ

0

ನೆಲ್ಯಾಡಿ: ಯೂನಿಯನ್ ಬ್ಯಾಂಕ್ ಆ- ಇಂಡಿಯಾ ಇದರ ನೆಲ್ಯಾಡಿ ಶಾಖೆಯಲ್ಲಿ ಸ್ಪೆಷಲ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಕೆ.ವಾಮನ ಅವರು ಫೆ.28ರಂದು ನಿವೃತ್ತಿಯಾಗಲಿದ್ದಾರೆ.

ವಿಟ್ಲ ನಿವಾಸಿಯಾಗಿರುವ ಕೆ.ವಾಮನ ಅವರು ತನಗೆ 20 ವರ್ಷವಾಗಿದ್ದಾಗ 1982ರಲ್ಲಿ ಇಂಡಿಯನ್ ಆರ್ಮಿಗೆ ಸೇರ್ಪಡೆಗೊಂಡು ಸುಮಾರು 17 ವರ್ಷ ಸೇವೆ ಸಲ್ಲಿಸಿ 1999ರಲ್ಲಿ ನಿವೃತ್ತಿಯಾಗಿದ್ದರು. ಸೇನೆಯಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ ಅವರು ಕಾರ್ಗಿಲ್ ವಾರ್‌ನಲ್ಲೂ ಪಾಲ್ಗೊಂಡಿದ್ದರು.

ಸೇನೆಯಿಂದ ನಿವೃತ್ತಿಯಾದ ಬಳಿಕ 2000ರಲ್ಲಿ ಅವರು ಕಾರ್ಪೊರೇಷನ್ ಬ್ಯಾಂಕ್‌ಗೆ ಸೇರ್ಪಡೆಗೊಂಡಿದ್ದರು. ಕಾರ್ಪೋರೇಷನ್ ಬ್ಯಾಂಕ್‌ನ ಮಂಗಳೂರು ಕೇಂದ್ರ ಕಚೇರಿಯಲ್ಲಿ ಆರಂಭದ 9 ವರ್ಷ ಸೇವೆ ಸಲ್ಲಿಸಿ ಬಳಿಕ ಬಂಟ್ವಾಳ, ಪಾಣೆಮಂಗಳೂರು, ನೆಲ್ಯಾಡಿ, ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿ ಮತ್ತೆ ನೆಲ್ಯಾಡಿ ಕಚೇರಿಗೆ ಆಗಮಿಸಿದ್ದರು.

ನೆಲ್ಯಾಡಿ ಶಾಖೆಯಲ್ಲಿ ಕಳೆದ 1 ವರ್ಷದಿಂದ ಸ್ಪೆಷಲ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂಡಿಯನ್ ಆರ್ಮಿಯಲ್ಲಿ 17 ವರ್ಷ ಹಾಗೂ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ 23 ವರ್ಷ ಸೇರಿ ಒಟ್ಟು 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಫೆ.28ರಂದು ನಿವೃತ್ತಿಯಾಗಲಿದ್ದಾರೆ. ಮೂಲತ: ವಿಟ್ಲ ನಿವಾಸಿಯಾಗಿರುವ ಕೆ.ವಾಮನ ಅವರು ಪ್ರಸ್ತುತ ಉಪ್ಪಿನಂಗಡಿ ನೂಜಿಯಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here