ಮಾ. 5, 6: ನಿಡ್ಪಳ್ಳಿ ಕರ್ನಪ್ಪಾಡಿ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ

0

ನಿಡ್ಪಳ್ಳಿ; ಶ್ರೀ ಬ್ರಹ್ಮಬೈದರ್ಕಳ ಗರಡಿ ಕರ್ನಪ್ಪಾಡಿ ಇದರ ವಾರ್ಷಿಕ ನೇಮೋತ್ಸವ ಮಾ.5 ಮತ್ತು 6 ರಂದು ಜರಗಲಿದೆ.

ಮಾ.5 ರಂದು ಬೆಳಿಗ್ಗೆ ಗಂಟೆ 10 ರಿಂದ ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ.ಸಂಜೆ ಗಂಟೆ 6 ರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7 ಕ್ಕೆ ಕೊಡಮಂತಾಯ ದೈವದ ಭಂಡಾರ ತೆಗೆದು ಗಂಟೆ 10 ರಿಂದ ನೇಮ ನಡೆಯಲಿದೆ.

ಮಾ.6 ರಂದು ಸಂಜೆ ಗಂಟೆ 5 ಕ್ಕೆ ಹೋಮ ನಂತರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ , ಅನ್ನಸಂತರ್ಪಣೆ. ರಾತ್ರಿ ಗಂಟೆ 10 ಕ್ಕೆ ಬೈದರುಗಳ ಗರಡಿ ಇಳಿಯುವುದು.ರಾತ್ರಿ ಗಂಟೆ 2 ಕ್ಕೆ ಕಿನ್ನಿದಾರು ಗರಡಿ ಇಳಿಯುವುದು.ಪ್ರಾತಃ ಕಾಲ ಗಂಟೆ 4 ಕ್ಕೆ ದರ್ಶನ ಪಾತ್ರಿಗಳ ಸೇಟ್, ಗಂಟೆ 5 ಕ್ಕೆ ಬೈದರುಗಳ ಸೇಟ್. ಮಾ.7ಕ್ಕೆ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಹಾಗೂ ಸಮಿತಿ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here