ಕಾಂಗ್ರೆಸ್‌ಅಲ್ಪಸಂಖ್ಯಾತ ಘಟಕದ ಸಭೆ

0

ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋದೇ ನಮ್ಮ ಗುರಿ- ಶಕೂರ್ ಹಾಜಿ

ಪುತ್ತೂರು: ಶತಾಯಗತಾಯ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಬೇಕಾಗಿದೆ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಕರೆ ನೀಡಿದರು. ಅವರು ಪುತ್ತೂರು ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಅಲ್ಪ ಸಂಖ್ಯಾತ ಘಟಕದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನಿಂದ ನಮಗೆಲ್ಲ ವಿಶ್ರಾಂತಿ ಇಲ್ಲದ ದಿನಗಳಾಗಿವೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಕಾಂಗ್ರೆಸ್ ಜಯಕ್ಕೆ ಶಕ್ತಿ ಮೀರಿ ಪ್ರಯತ್ನಿಸೋಣ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಚುನಾವಣಾ ತಯಾರಿ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಪ್ರ.ಕಾರ್ಯದರ್ಶಿ ಶರೀಫ್ ಕೊಯಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಅಸ್ಮಾ ಗಟ್ಟಮನೆ, ಮಹಾಲಿಂಗ ನಾಯ್ಕ, ಸಿದ್ದಿಕ್ ಸುಲ್ತಾನ್, ಸಂತೋಷ್ ಭಂಡಾರಿ ಚಿಲ್ಮತ್ತಾರ್, ಶರೀಫ್ ಬಲ್ನಾಡ್, ಹಮೀದ್ ಕೊಮ್ಮೆಮಾರ್, ಹಾರಿಸ್ ಸಂಟ್ಯಾರ್, ಮಹಮ್ಮದ್ ಪಿ.ಕೆ., ಸಿರಿಲ್ ರೋಡ್ರಿಗಸ್, ಬಶೀರ್ ಕೌಡಿಚಾರ್, ಜೈನುದ್ದೀನ್ ರೆಂಜಲಾಡಿ, ಸಲಾಂ ಸಂಪ್ಯ, ಅಬ್ದುಲ್ಲ ಕುಂಞಿ ಮೆನಸಿನಕಾನ, ರಹಮಾನ್ ಕಾವು, ಸಿನಾನ್, ಅಝೀಝ್ ರೆಂಜಲಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here