ಹೊಸ ಆಡಳಿತದೊಂದಿಗೆ ಗಾಳಿಮುಖದಲ್ಲಿ ʼದಿ ಮೌಂಟ್‌ XIʼ ಶಾಲೆ ಆರಂಭ

0

ಪುತ್ತೂರು: ಗಾಳಿಮುಖ ಕೆ.ಎಸ್‌ ನಗರದ ಪುದಿಯವಳಪ್ಪುನಲ್ಲಿರುವ ಖಲೀಲ್‌ ಸ್ವಲಾಹ್ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ 2023-24 ಶೈಕ್ಷಣಿಕ ವರ್ಷದಿಂದ ನೂತನ ಆಡಳಿತ ವ್ಯವಸ್ಥೆಯೊಂದಿಗೆ ಆರಂಭವಾಗಲಿದೆ.

ಆಧುನಿಕ ಗ್ರಂಥಾಲಯ, ಸಂಪೂರ್ಣ ಸುಸಜ್ಜಿತ ವಿಜ್ಞಾನ ಪ್ರಯೋಗ ಶಾಲೆ, ಉತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯಗಳನ್ನೊಳಗೊಂಡಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನು ಅಳವಡಿಸಿಕೊಂಡು ʼದಿ ಮೌಂಟ್‌ XIʼ ಆರಂಭಗೊಳ್ಳಲಿದೆ.

2023-24ರ ಶಾಲಾ ಪ್ರವೇಶ ಶುಲ್ಕ ಸಂಪೂರ್ಣ ಉಚಿತವಾಗಿದ್ದು ಉತ್ತಮ ಶೈಲಿಯ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಹಲವು ಪಠ್ಯೇತರ ಚಟುವಟಿಕೆಗಳ ಮೂಲಕ ನಿಮ್ಮ ಮಕ್ಕಳ ಆಸಕ್ತಿಗೆ ತಕ್ಕಂತೆ ಕಲಿಕಾ ವೇದಿಕೆಯನ್ನು ನೂತನ ಆಡಳಿತ ಮಂಡಳಿ ನಿರ್ಮಿಸಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಕಾವು ಹೇಮನಾಥ ಶೆಟ್ಟಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here