ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಶಾಲಾ ಸಂಕೀರ್ಣದಲ್ಲಿ ವೈದಿಕ ಕಾರ್ಯಕ್ರಮ

0

ವಿಟ್ಲ : ಮಾಣಿ, ಪೆರಾಜೆಯಲ್ಲಿ ನಿರ್ಮಾಣಗೊಂಡಿರುವ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಸಂಕೀರ್ಣದಲ್ಲಿ ವಾಸ್ತು ಪೂಜೆ, ವಾಸ್ತು ರಕ್ಷೋಘ್ನ ಹೋಮ, ಗಣ ಹೋಮ ಹಾಗೂ ಸತ್ಯನಾರಾಯಣ ದೇವರಪೂಜೆ ಸಹಿತ ವೈದಿಕ ಕಾರ್ಯಕ್ರಮಗಳು ನಡೆಯಿತು.

ವೈದಿಕರಾದ ವೇದಮೂರ್ತಿ ಅನಂತ ಭಟ್ ಕಶೆಕೋಡಿರವರು ವೈದಿಕ ವಿಧಿವಿಧಾನವನ್ನು ನೆರವೇರಿಸಿದರು. ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮವು ನಡೆಯಿತು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಶಾಲಾ ಸಂಚಾಲಕರಾದ ಪ್ರಹ್ಲಾದ್ ಜೆ.ಶೆಟ್ಟಿ, ಉಪಾಧ್ಯಕ್ಷರಾದ ಯತಿರಾಜ್ ಕೆ.ಎನ್, ಕಾರ್ಯದರ್ಶಿ ಮಹೇಶ್ ಜೆ.ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸುಭಾಷಿಣಿ ಎ.ಶೆಟ್ಟಿ ಹಾಗೂ ಜಯಲಕ್ಷ್ಮೀ ಎನ್. ಪೈ, ಶಾಲಾ ಆಡಳಿತಾಧಿಕಾರಿಯಾದ ರವೀಂದ್ರ ಡಿ, ಮುಖ್ಯೋಪಾಧ್ಯಾಯಿನಿಯವರಾದ ವಿಜಯಲಕ್ಷ್ಮೀ ವಿ. ಶೆಟ್ಟಿ, ಬಾಲವಿಕಾಸ ಶಾಲೆಯ ನೂತನ ಕಟ್ಟಡ ನಿರ್ಮಾಣ ಸಂಸ್ಥೆ ಯಮುನಾ ಬಿಲ್ಡರ್ಸ್ ಮಾಲಕರಾದ ಪುರುಷೋತ್ತಮ್ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here