ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಿನ್ನೆಲೆ
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವಂತೆ ಸೂಚನೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಎ.10 ರಿಂದ 19ರ ತನಕ ಪ್ರತಿದಿನ ಸಂಜೆ ಗಂಟೆ 5 ರಿಂದ ರಾತ್ರಿ 10ರ ತನಕ ಸಂಗೀತ , ಭರತನಾಟ್ಯ ಮುಂತಾದ ಭಾರತೀಯ ಸಂಸ್ಕೃತಿಯ ಕಲಾ ಪ್ರದರ್ಶನ ಹಮ್ಮಿಕೊಳ್ಳಲು ವ್ಯವಸ್ಥಾಪನ ಸಮಿತಿಯು ತೀರ್ಮಾನಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವವರು ಹೆಸರು ನೋಂದಾಯಿಸುವಂತೆ ದೇವಳ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ತಿಳಿಸಿದ್ದಾರೆ.

ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅಪೇಕ್ಷಿಸುವ ನಾಟ್ಯ ಶಾಲೆ, ಸಂಗೀತ ಶಾಲೆ, ಕಲಾ ಸಂಘಟನೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಯಸುವ ಅಪೇಕ್ಷಿತರು ಮಾ.15 ರೊಳಗೆ ಸಂಪೂರ್ಣ ಮಾಹಿತಿಗಳನ್ನೊಳ ಗೊಂಡ ಅರ್ಜಿಯನ್ನು ದೇವಳದ ಕಚೇರಿಯಲ್ಲಿ ನೀಡಲು ತಿಳಿಸಲಾಗಿದೆ.

ತಂಡಗಳಿಗೆ ಯಾವುದೇ ಸಂಭಾವನೆ ನೀಡಲಾಗುವುದಿಲ್ಲ. ಭಜನಾ ತಂಡಗಳಿಗೆ ಹೊರಾಂಗಣದಲ್ಲಿ ಭಜನೆ ಮಾಡಲು ಅವಕಾಶವಿದೆ. ತಂಡಗಳು ತಮ್ಮ ತಂಡವನ್ನು ಕಚೇರಿಯಲ್ಲಿ ನೋಂದಾಯಿಸಲು ಈ ಮೂಲಕ ತಿಳಿಸಲಾಗಿದೆ. ತಂಡಗಳಿಗೆ ನಿಗದಿ ಮಾಡಿಸಿದ ದಿನಾಂಕ, ಸಮಯವನ್ನು ಮುಂದೆ ತಿಳಿಸಲಾಗುವುದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here