ಮಂಗಳೂರು :ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ.11 ರಿಂದ 16ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮನಾಥ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾ.6 ರಂದು ಸಂಜೆ ಗಂಟೆ 5.30ಕ್ಕೆ ಸಂತ ಏಲಂ ಕರೆಯಲಾಗುವುದು. ಧ್ವಜಸ್ತಂಭಕ್ಕೆ ಅಡಿಕೆ ಗೊನೆ, ಸಿಯಾಳ ಗೊನೆ, ಬಾಳೆಹಣ್ಣಿನ ಗೊನೆ ಕೊಡುವವರು ಮಾ.10ರ ಶುಕ್ರವಾರ ಸಾಯಂಕಾಲದ ಒಳಗಾಗಿ ಕೊಡಬೇಕಾಗಿ ಅವರು ಭಕ್ತಾದಿಗಳಲ್ಲಿ ವಿನಂತಿ ಮಾಡಿದ್ದಾರೆ.
ಮಾ.12 ರಂದು ರವಿವಾರ 108 ತೆಂಗಿನಕಾಯಿ ಗಣಹೋಮ ಜರುಗಲಿದೆ.ಮಾ.15 ನೇ ಬುಧವಾರ ಮಧ್ಯಾಹ್ನ ಗಂಟೆ 12.00ಕ್ಕೆ ಪೂಜೆಯಾಗಿ ರಥಾರೋಹಣ ನಂತರ ಸಾಯಂಕಾಲ ಗಂಟೆ 7 ಗಂಟೆಗೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ ಶ್ರೀಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ.ಶ್ರೀದೇವಿಯ ಶಯನಕ್ಕೆ ಹೂಗಳನ್ನು ತಂದು ಕೊಡುವವರು ಅದೇ ದಿನ ಸಾಯಂಕಾಲದ ಒಳಗೆ ಕೊಡಬೇಕು.
ಮಾ.16ನೇ ಗುರುವಾರ ಬೆಳಗ್ಗೆ ಸೂರ್ಯೋದಯಕ್ಕೆ (ಗಂಟೆ ೦೬:೩೪ ಕ್ಕೆ) ಕವಾಟೊದ್ಘಾಟನೆ ನಡೆಯಲಿರುವುದು. ಸಾಯಂಕಾಲ 7.೦೦ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ.
ಮಾ. 17ನೇ ಶುಕ್ರವಾರ ಸಂಪ್ರೋಕ್ಷಣೆ, ರಾತ್ರಿ ಗಂಟೆ 8.30 ಕ್ಕೆ ಶ್ರೀಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರುಗಲಿರುವುದು. ಬೆಳಿಗ್ಗೆ ಸೀರೆ ಏಲಂ ಮಾಡಲಾಗುವುದು
ಮಾ,18ರಂದು ಬೆಳಗ್ಗೆ 9.30ಕ್ಕೆ ಹರಕೆಯ ತುಲಾಭಾರ ನಡೆಯಲಿರುವುದು..
ಸಾಂಸ್ಕೃತಿಕ ಕಾರ್ಯಕ್ರಮ :
ಮಾ.12 ನೇ ರವಿವಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿ, ಸಂಜೆ 6.00 ನಾದಸ್ವರ,
ಮಾ.13 ಸ್ಯಾಕ್ರೋಫೋನ್ ಕಾರ್ಯಕ್ರಮ ಸಂಜೆ ೬.೦೦ರಿಂದ ೧೦.೦೦ರವರೆಗೆ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ.
ಮಾ.14ನೇ ಮಂಗಳವಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಣ್ಣ ನಾದಸ್ವರ ೬.೦೦ರಿಂದ ೧೦.೦೦ರವರೆಗೆ ಸಣ್ಣ ನಾದಸ್ವರ ಕಾರ್ಯಕ್ರಮ ಜರಗಲಿರುವುದು.
ಶ್ರೀಕ್ಷೇತ್ರದಲ್ಲಿ ನಡೆಯುವ ಅನ್ನಸಂತರ್ಪಣೆ, ಸರಳವಿವಾಹ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ರಮನಾಥ ಹೆಗ್ಡೆ ತಿಳಿಸಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಬಿ. ರಾಮನಾಯ್ಕ್ ಕೋಟೆಕಾರ್, ಪ್ರೇಮಲತಾ ಎಸ್. ಕುಮಾರ್ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟಕ ಸುಧಾಕರ ರಾವ್ ಪೇಜಾವರ, ವಿನಯಾನಂದ, ಕಲಾವಿದ ನಾಗೇಶ್ ಬಪ್ಪನಾಡು ಉಪಸ್ಥಿತರಿದ್ದರು.