ಎಂ.ಕಾಂ. ಪರೀಕ್ಷೆ ದೀಪಾ ಸಿ.ಭಟ್‌ಗೆ ಪ್ರಥಮ ರ‍್ಯಾಂಕ್

0

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ವಿದ್ಯಾರ್ಥಿನಿಯಾಗಿದ್ದ ದೀಪಾ ಸಿ ಭಟ್, ಸೆಪ್ಟೆಂಬರ್/ಅಕ್ಟೋಬರ್ 2022ರ ಎಂ.ಕಾಂ. ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದಿರುತ್ತಾರೆ.

ಇವರು ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪಾಂಗಳಾಯಿ ಬೆಥನಿ ಶಾಲೆಯಲ್ಲಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ.10ನೇ ಮತ್ತು ಪಿಯುಸಿ ಯಲ್ಲಿ ವಿಶಿಷ್ಟಶ್ರೇಣಿಯಲ್ಲಿ ಯೂ ಬಿಕಾಂನಲ್ಲಿ 4ನೇ ರ‍್ಯಾಂಕ್ ಪಡೆದಿರುತ್ತಾರೆ

ಅಲ್ಲದೇ NET ಮತ್ತು JRF ಪರೀಕ್ಷೆ ಯಲ್ಲಿ ಶೇಕಡಾವಾರು 99 ಅಂಕದೊಂದಿಗೆ ತೇರ್ಗಡೆಯಾಗಿ ಪ್ರಸ್ತುತ ಮಾಹೆ ಮಣಿಪಾಲದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ. ಇವರು ಮೊಟ್ಟೆತ್ತಡ್ಕದ ಚಂದ್ರಶೇಖರ್ ಯಸ್ ಭಟ್ ಮತ್ತು ಶ್ರೀದೇವಿ ಸಿ ಭಟ್ ದಂಪತಿಗಳ ಸುಪುತ್ರಿಯಾಗಿದ್ದಾರೆ

LEAVE A REPLY

Please enter your comment!
Please enter your name here