ಸ್ಪೆಲ್ ಬೀ ಸ್ಪರ್ಧೆಯಲ್ಲಿ ಮಿಂಚಿದ ಸುದಾನ ಶಾಲೆಯ ವಿದ್ಯಾರ್ಥಿಗಳು

0

ಪುತ್ತೂರು : ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನ್ಯಾಶನಲ್ ಸ್ಪೆಲ್ ಬೀಯವರು ಶಾಲಾ ಮಟ್ಟದಲ್ಲಿ ಆಯೋಜಿಸಿದ್ದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಿಯೊನ್ ಮಿನೇಜಸ್ (1ನೇ), ಅದ್ವಿಕ ಶೆಟ್ಟಿ (2ನೇ), ಆಕಾಶ್ ಮಯ್ಯ (4ನೇ), ಹೃತ್ವಿಕ ಆರ್ ನಾಯ್ಕ್ (5ನೇ), ರಚನಾ ಯು.ಎ (7ನೇ) ಮತ್ತು ಲಿಶಾನ್ ಮಿರಾಂಡ (10ನೇ) ರವರು ಅತ್ಯುತ್ತಮ ಶ್ರೇಣಿಯೊಂದಿಗೆ ಸ್ವರ್ಣಪದಕಕ್ಕೆ ಭಾಜನರಾಗಿದ್ದಾರೆ.


ಈ ಸ್ಪರ್ಧೆಯಲ್ಲಿ ಶಾಲೆಯ ಒಟ್ಟು 107 ವಿದ್ಯಾರ್ಥಿಗಳು ಭಾಗವಹಿಸಿದ್ದು 100 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅಂತರ್‌ ಶಾಳಾ ನ್ಯಾಷನಲ್ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ.ಇಂಗ್ಲೀಷ್ ಭಾಷಾ ಶಿಕ್ಷಕರಾದ ರೇಖಾ ಮತ್ತು ದಿವ್ಯ ಮರಿಯಾಡೆಸಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್‌ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here