ಪುಣಚ: ಅಷ್ಟಬಂಧ ಬ್ರಹ್ಮಕಲಶೋತ್ಸವ – ಉಗ್ರಾಣ ಮುಹೂರ್ತ – ಹಸಿರುವಾಣಿ ಸಮರ್ಪಣೆ

0

ಪುಣಚ: ಇಲ್ಲಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಉಗ್ರಾಣ ಮುಹೂರ್ತ ಮಾ. 8 ರಂದು ಬೆಳಿಗ್ಗೆ ನಡೆಯಿತು. ಅಜೇರು ಪುರುಷೋತ್ತಮ ನಾಯಕ್ ಮಲ್ಯ ರವರು ದೀಪ ಬೆಳಗಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು. ಸಂಜೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಯು ಪರಿಯಾಲ್ತಡ್ಕದಿಂದ ಆರಂಭಗೊಂಡಿತು. ನಿವೃತ್ತ ಮುಖ್ಯಗುರು ರಾಮಚಂದ್ರ ಭಟ್ ಕುಪ್ಳುಚ್ಚಾರುರವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.

ಆಡಳಿತ ಸಮಿತಿ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಟ್ಲ ಅರಮನೆಯ ಬಂಗಾರು ಅರಸರು, ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು, ಕಾರ್ಯಾಧ್ಯಕ್ಷ ಶಂಕರನಾರಾಯಣ ಭಟ್ ಮಲ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿ ದಲ್ಕಜೆಗುತ್ತು, ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಲೋಕೇಶ ನಾಯ್ಕ ಟಿ., ಪದಾಧಿಕಾರಿಗಳು, ಸದಸ್ಯರು, ಭಕ್ತಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ವೈಭವದಿ ನಡೆದ ಮೆರವಣಿಗೆ
ಗ್ರಾಮದ ವಿವಿಧ ಕಡೆಗಳಿಂದ ಮತ್ತು ಪರವೂರಿನಿಂದ ಬಂದ ಹಸಿರು ಹೊರೆಕಾಣಿಕೆಗಳನ್ನು ಹೊತ್ತ ನೂರಾರು ವಾಹನಗಳು ಪರಿಯಾಲ್ತಡ್ಕದಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ನಡೆಯಿತು. ಬ್ಯಾಂಡ್ ವಾದ್ಯ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಕೀಲು ಕುದುರೆ, ಸಿಂಗಾರಿ ಮೇಳ, ಬಣ್ಣದ ಬೆಲ್ಗೊಡೆ, ಪೂರ್ಣಕುಂಭದ ಮಹಿಳೆಯರ ಸಾಲು, ಹಲವು ಭಜನಾ ತಂಡಗಳಿಂದ ನೃತ್ಯ ಭಜನೆ ಮೂಲಕ ಮೆರವಣಿಗೆಯು ವೈಭವದಿಂದ ದೇವಸ್ಥಾನಕ್ಕೆ ಸಾಗಿಬಂತು.

LEAVE A REPLY

Please enter your comment!
Please enter your name here