ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ಮಹಿಳಾ ದಿನಾಚರಣೆ

0

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘ ನೆಲ್ಯಾಡಿ ಇಲ್ಲಿ ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನೆಲ್ಯಾಡಿ ಸಾಂದ್ರ ಬ್ಯೂಟಿ ಪಾರ್ಲರ್ ಮಾಲಕಿ ವಿ.ಎ.ರೋಸಮ್ಮರವರು ಉದ್ಘಾಟಿಸಿ ಶುಭಹಾರೈಸಿದರು.

ಸಂಘದ ಅಧ್ಯಕ್ಷೆ ಉಷಾ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಎಂದಿಗೂ ಅಬಲೆಯರಲ್ಲ ಸಬಲೆಯರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಮುಂದೆ ಬರಬೇಕು ಎಂದರು. ಸಂಘದ ಉಪಾಧ್ಯಕ್ಷೆ ಮೇಘನಾ ಶೈನ್ ಕಾರ್ಯದರ್ಶಿ ಚೈತನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಪಿಗ್ಮಿ ಸಂಗ್ರಹ ಆರಂಭಿಸಿದ ಮಹಿಳೆ ಸವಿತಾ ಜೆ. ಅವರನ್ನು ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.

ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು, ಗ್ರಾಹಕರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಕಾರ್ಯದರ್ಶಿ ಚೈತನ್ಯ ಸ್ವಾಗತಿಸಿ, ಸಿಬ್ಬಂದಿ ಸ್ವಾತಿ ಕೆ., ವಂದಿಸಿದರು. ಸಂಘದ ಲೆಕ್ಕಾಧಿಕಾರಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ದಿವ್ಯಾ ಪ್ರಾರ್ಥಿಸಿದರು.

ಗ್ರಾಹಕರಿಗೆ ವಿಶೇಷ ಕೊಡುಗೆ:
ಮಹಿಳಾ ದಿನಾಚರಣೆ ಪ್ರಯುಕ್ತ ಸಂಘದಲ್ಲಿ ಮಾ.8ರಿಂದ 10ರ ತನಕ ಮಹಿಳಾ ಗ್ರಾಹಕರಿಗೆ ಠೇವಣಿಗೆ ವಿಶೇಷ ಬಡ್ಡಿದರ ಹಾಗೂ ಆಕರ್ಷಕ ಉಡುಗೊರೆ ನೀಡಲಾಗುವುದು. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಿ.
ಉಷಾ ಅಂಚನ್, ಅಧ್ಯಕ್ಷರು

LEAVE A REPLY

Please enter your comment!
Please enter your name here