ಬೆಟ್ಟಂಪಾಡಿ: ಇಲ್ಲಿನ ಕಕ್ಕೂರು ನಿವಾಸಿ ಗಣಪತಿ ಭಟ್ (79 ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.24ರಂದು ಮುಂಜಾನೆ ನಿಧನರಾದರು.
ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ, ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕರಾಗಿ, ಶಾಲೆಯ ವಿದ್ಯಾಗಂಗೋತ್ರಿ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷರಾಗಿ, ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮನೆತನಗಳ ಪೈಕಿ ಕಕ್ಕೂರು ಮನೆತನದ ಪ್ರಮುಖರಾಗಿದ್ದರು.
ಮೃತರು ಪುತ್ರರಾದ ಅನಂತ ಪದ್ಮನಾಭ ಭಟ್, ಗೋವರ್ಧನ ಭಟ್, ವಸಂತ ಕುಮಾರ್ ಕೆ., ನೀಲಕಂಠ ಭಟ್ ಕೆ., ಪುತ್ರಿಯರಾದ ಶಕುಂತಳಾ ಜಯರಾಂ, ಸುಮಿತ್ರಾ ಬಾಲಕೃಷ್ಣ ಭಟ್, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟ್ರಮಣ ಭಟ್ ಕಾನುಮೂಲೆಯವರು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಜಗನ್ನಾಥ ಶೆಟ್ಟಿ ಕೊಮ್ಮಂಡ ಮತ್ತಿತರರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.