ಯಂಗ್ ಬ್ರಿಗೇಡ್ ಸೇವಾದಳದಿಂದ ಕಿಲ್ಲೆ ಮೈದಾನದಲ್ಲಿ ರಾಜೀವ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ

0

ರಕ್ತದಾನವೇ ಪ್ರವೇಶ ಶುಲ್ಕ
32 ಮಂದಿ ಕಾಂಗ್ರೆಸ್ ಕಾರ್ಯಕರ್ತರ ತಂಡ
ವಿಜೇತರಿಗೆ ನಗದು ಬಹುಮಾನ
ಆಟೋ ರಿಕ್ಷಾ ಚಾಲಕರಿಗೆ ಸನ್ಮಾನ

ಪುತ್ತೂರು: ಯಾವುದೇ ಪ್ರವೇಶ ಶುಲ್ಕ ಇಲ್ಲದೆ ರಕ್ತದಾನ ಮಾಡುವ ಮೂಲಕ ಕಿಲ್ಲೆ ಮೈದಾನದಲ್ಲಿ ಎರಡು ದಿನ ರಾಜೀವ್ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರೀಯಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ರಿಕೆಟ್ ಪಂದ್ಯಾಟಕ್ಕೆ ಭಾಗವಹಿಸಲು ಮಾ.10ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ತಂಡದ ಕ್ರೀಡಾಪಟುಗಳೇ ರಕ್ತದಾನ ಮಾಡಬೇಕಾಗಿಲ್ಲ ಅವರ ಪರವಾಗಿ ಬೇರೆಯವರು ರಕ್ತದಾನ ಮಾಡಬಹುದು. ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 50ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 30ಸಾವಿರ ನಗದು ಟ್ರೋಫಿ ನೀಡಲಾಗುವುದು. ಕ್ರೀಡಾಪಟುಗಳು ಕಾಂಗ್ರೆಸ್ ಪಕ್ಷದ ಚಿಹ್ನೆಯ ಜರ್ಸಿ ಧರಿಸಿ ಆಡಲಿದ್ದಾರೆ ಎಂದು ಅವರು ಹೇಳಿದರು.

ಆಟೋ ರಿಕ್ಷಾ ಚಾಲಕರಿಗೆ ಸನ್ಮಾನ:
ಮತದಾನದ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಸಹಕರಿಸುವ ಕಾಂಗ್ರೆಸ್ ಕಾರ್ಯಕರ್ತರ ಆಟೋ ರಿಕ್ಷಾ ಚಾಲಕರೊಂದಿಗೆ ಆಟೋ ರಿಕ್ಷಾದ ಮೆರವಣಿಗೆ ಮಾ.11ರಂದು ನಡೆಯಿಲಿದೆ. ಸಂಜೆ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಆಟೋ ರಿಕ್ಷಾ ಚಾಲಕರನ್ನು ಗೌರವಿಸಲಾಗುವುದು. ಇದರ ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಮಹಿಳಾ ಕಾರ್ಯಕರ್ತರನ್ನು ಗೌರವಿಸಲಾಗುವುದು. ಅವರಿಗೆ ಅದೃಷ್ಟ ಚೀಟಿ ಯೋಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಜೇತರಿಗೆ ಚಿನ್ನದ ಉಂಗುರ, ಟಿವಿ ಸಹಿತ ಹಲವು ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯಂಗ್ ಬ್ರಿಗೇಡ್ ಪುತ್ತೂರು ಘಟಕದ ಅಧ್ಯಕ್ಷ ರಂಜಿತ್ ಬಂಗೇರ, ಕೋಶಾಧಿಕಾರಿ ಷರೀಫ್ ಬಲ್ನಾಡು, ಪ್ರಧಾನ ಕಾರ್ಯದರ್ಶಿ ಸನತ್ ರೈ, ಸದಸ್ಯ ಅಡ್ವರ್ಡ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here