ಮಾ. 11: ಗುಮ್ಮಟೆಗದ್ದೆ ಸಮೃದ್ಧಿ ಯುವ ವೇದಿಕೆ ವಾರ್ಷಿಕೋತ್ಸವ – ಸತ್ಯನಾರಾಯಣ ಪೂಜೆ, ಗುಳಿಗ ದೈವದ ಹರಕೆ ನೇಮೋತ್ಸವ

0

ಬೆಟ್ಟಂಪಾಡಿ: ಗುಮ್ಮಟೆಗದ್ದೆ ಶ್ರೀಕೃಷ್ಣನಗರದ ಸಮೃದ್ಧಿ ಯುವ ವೇದಿಕೆ, ಶ್ರೀಕೃಷ್ಣ ಭಜನಾ ಮಂಡಳಿ ಮತ್ತು ಸಮೃದ್ಧಿ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ 20 ನೇ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುಳಿಗ ದೈವಕ್ಕೆ ಹರಕೆ ನೇಮೋತ್ಸವವು ಮಾ. 11 ರಂದು ನಡೆಯಲಿದೆ.

ಬೆಳಿಗ್ಗೆ ಗಣಪತಿ ಹೋಮ, ಸಂಜೆ ವೇ.ಮೂ. ದಿನೇಶ್ ಮರಡಿತ್ತಾಯರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಬಳಿಕ ಚೆಲ್ಯಡ್ಕ ದೈವಸ್ಥಾನದಿಂದ ಭಂಡಾರ ಬಂದು ರಾತ್ರಿ ಗುಳಿಗ ದೈವದ ಹರಕೆ ನೇಮೋತ್ಸವ ಜರಗಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here