ಮಾ.11, 12: ನಿಡ್ಪಳ್ಳಿ ಗುತ್ತು ಚಾವಡಿಯಲ್ಲಿ ಧರ್ಮ ನೇಮ

0

ನಿಡ್ಪಳ್ಳಿ; ನಿಡ್ಪಳ್ಳಿ ಗುತ್ತು ಚಾವಡಿಯಲ್ಲಿ ಮಾ.11 ಮತ್ತು 12 ರಂದು ಧರ್ಮ ನೇಮ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.

ಕಾರ್ಯಕ್ರಮಗಳು: ಮಾ.11 ರಂದು ಬೆಳಿಗ್ಗೆ ಗಣಪತಿ ಹವನ, ಗಂಟೆ 10 ಕ್ಕೆ ಶುದ್ದಿ ಕಲಶ, ದೈವಗಳಿಗೆ ತಂಬಿಲ ಸೇವೆ. ಮಧ್ಯಾಹ್ನ 12.30 ಕ್ಕೆ ಗುತ್ತು ಮನೆಯಲ್ಲಿ ಮಾಲ ಕಾರ್ಯ, ಮಧ್ಯಾಹ್ನ ಗಂಟೆ 1 ಕ್ಕೆ ಅನ್ನಸಂತರ್ಪಣೆ. ಸಂಜೆ ಗಂಟೆ 6 ಕ್ಕೆ ಪಲ್ಲಪೂಜೆ. ರಾತ್ರಿ ಗಂಟೆ 8 ಕ್ಕೆ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ. ರಾತ್ರಿ ಗಂಟೆ 8.15 ಕ್ಕೆ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಬರುವುದು.ಗಂಟೆ 8.30 ಕ್ಕೆ ಗುತ್ತು ಚಾವಡಿಯಿಂದ ದೈವಗಳ ಭಂಡಾರ ಇಳಿಯುವುದು. ಗಂಟೆ 9 ಕ್ಕೆ ಅನ್ನಸಂತರ್ಪಣೆ, ಗಂಟೆ 10 ಕ್ಕೆ ಹುಲಿಭೂತ ದೈವದ ನೇಮ, ಪ್ರಸಾದ ವಿತರಣೆ.

ಮಾ.12 ರಂದು ಬೆಳಿಗ್ಗೆ ಗಂಟೆ 8.30 ಕ್ಕೆ ಮಲರಾಯ ದೈವದ ನೇಮ, ಗಂಟೆ 12.30 ಕ್ಕೆ ಪ್ರಸಾದ ವಿತರಣೆ ನಂತರ ಮಹಾ ಅನ್ನಸಂತರ್ಪಣೆ. ಅಪರಾಹ್ನ ಗಂಟೆ 3 ಕ್ಕೆ ಧೂಮಾವತಿ ದೈವದ ನೇಮ, ಪ್ರಸಾದ ವಿತರಣೆ. ಸಂಜೆ ಗಂಟೆ 4 ಕ್ಕೆ ಅಂಗಣ ಪಂಜುರ್ಲಿ ದೈವದ ನೇಮ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ನಿಡ್ಪಳ್ಳಿ ಗುತ್ತು ಪ್ರವೀಣ ಎನ್.ಆರಿಗ ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here