ಪುತ್ತೂರು: ಮಾರ್ಚ್ 11 ಮತ್ತು 12ರಂದು ಉಪ್ಪಿನಂಗಡಿ ಸಮೀಪದಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯಲಿರುವ 37ನೇ ವರ್ಷದ ಹೊನಲು ಬೆಳಕಿನ ವಿಜಯ ವಿಕ್ರಮ ಜೋಡುಕರೆ ಕಂಬಳದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ಕಾರ್ಯಕ್ರಮವು ಮಾ.9ರಂದು ಸುದ್ದಿ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್‌ಚಾನೆಲ್ ನಲ್ಲಿ ನೇರಪ್ರಸಾರಗೊಂಡಿತು.
ಕಾರ್ಯಕ್ರಮದಲ್ಲಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ, ಕೋಡಿಂಬಾಡಿ ರೈಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಅಶೋಕ್ ಕುಮಾರ್‌ರೈ, ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತರಾಮ ಶೆಟ್ಟಿ ಹೆಗ್ಡೆಹಿತ್ಲು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕಂಬಳದ ಇತಿಹಾಸ, ಬೆಳೆದು ಬಂದ ಹಾದಿ, ಕಂಬಳ ಉಳಿವಿನ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ, ಸರಕಾರದಿಂದ ಅನುದಾನ ತಂದುಕೊಡಲು ನಡೆದಿರುವ ಪ್ರಯತ್ನಗಳು, ಆಗಿರುವ ತೊಂದರೆಗಳು, ಕಂಬಳವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಆಗಬೇಕಿರುವ ಕೆಲಸಗಳು, ಉಪ್ಪಿನಂಗಡಿ ಕಂಬಳದ ವಿಶೇಷತೆ ಇತ್ಯಾದಿ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಅತಿಥಿಗಳು ಅಭಿಪ್ರಾಯಗಳನ್ನು ಹಂಚಿಕೊಂಡರು. ವಿವಿಧೆಡೆಗಳಿಂದ ಕಂಬಳಾಭಿಮಾನಿಗಳು ಕರೆಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸುದ್ದಿ ಚಾನೆಲ್ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.