“ದ ಹಿಂದೂ” ಅಂತರ್ ಶಾಲಾ ವಿಜ್ಞಾನ ಮೇಳದಲ್ಲಿ ವಿಜೇತರಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು

0

ಪುತ್ತೂರು: ವಿದ್ಯಾರ್ಥಿಗಳಲ್ಲಿ ವೈಜ್ಣಾನಿಕ ಮನೋಧರ್ಮ ಜಾಗೃತಗೊಳ್ಳಬೇಕೆಂಬ ನಿಟ್ಟಿನಲ್ಲಿ, ದ ಹಿಂದೂ ಹಾಗೂ KIOCL ಇವರ ಜಂಟಿ ಆಶ್ರಯದಲ್ಲಿ ‘ಮೇಕ್ ಇನ್ ಇಂಡಿಯಾ’ ಎಂಬ ವಿಷಯದ ಮೇಲೆ ಅಂತರ್ ಶಾಲಾ ವಿಜ್ಞಾನ ಮೇಳವನ್ನು ಮಂಗಳೂರಿನ ನೆಹರು ಭವನ,KIOCL, ಟೌನ್ ಶಿಪ್ ಕಾವೂರಿನಲ್ಲಿ ಮಾರ್ಚ್ 4ರಂದು ಆಯೋಜಿಸಲಾದ ಸ್ಪರ್ಧೆಯಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಾದ 7ನೇ ತರಗತಿಯ ಧನ್ಯಶ್ರೀ ಎಚ್.ಪಿ (ಪ್ರಕಾಶ್ ಎಚ್. ಕೆ , ಮಾಲಿನಿ ಕೆ. ಎನ್ ಅವರ ಪುತ್ರಿ) ಹಾಗೂ ನಿಕ್ಷೇಪ ಆರ್. ರೈ ( ಕೆ. ರಮೇಶ್ ರೈ , ಶ್ರೀಲತಾ ಆರ್. ರೈ ಅವರ ಪುತ್ರಿ) ಅವರು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಮಾತ್ರವಲ್ಲದೆ, ಎಂಟನೇ ತರಗತಿಯ ಪಿ. ಶಶಾಂಕ್ ಭಟ್ (ಪಿ. ಗೋವಿಂದರಾಜ್ , ಪ್ರತಿಮಾ ಪಿ ಯವರ ಪುತ್ರ) ಹಾಗೂ ಸಂಚಯ್ ಎಸ್. ಗೌಡ (ಶಿವಾನಂದ ಗೌಡ, ಚೇತನ ಅವರ ಪುತ್ರ) ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸಿಂಧೂ. ವಿ. ಜಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here