ಬೀರ‍್ನಹಿತ್ಲು ಮನೆಯಂಗಳದಲ್ಲಿ ಮಹಿಳೆ ಶವ ಪತ್ತೆ !

0

ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಬೀರ್‍ನಹಿತ್ಲು ಎಂಬಲ್ಲಿ ಮನೆಯಂಗಳದಲ್ಲೇ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಮಾ.10ರಂದು ಸಂಜೆ ಬೆಳಕಿಗೆ ಬಂದಿದೆ.


ಬೀರ್‍ನಹಿತ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯ ನಿವಾಸಿ ಕೊರಗಪ್ಪ ಎಂಬವರ ಪತ್ನಿ ಗಿರಿಜಾ(45ವ) ಎಂಬವರು ಮೃತಪಟ್ಟವರು.ಮಧ್ಯಾಹ್ನ ಹುಲ್ಲು ತರಲೆಂದು ಗುಡ್ಡೆಗೆ ಹೋಗಿದ್ದರು.ಬಳಿಕ ಮನೆಯ ಕಟ್ಟೆಯಲ್ಲಿ ಕುಳಿತವರು ಕುಸಿದು ಬಿದ್ದಿದ್ದರೆಂದು ಹೇಳಲಾಗಿದೆ.ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಎಸ್.ಐ ಶ್ರೀಕಾಂತ್ ರಾಥೋಡ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.ಮೃತರು ಗಂಡ ಕೊರಗಪ್ಪ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here