ಭಾರ್ಗವಿ ಬಿಲ್ಡರ್‍ಸ್‌ನ `ಕೈಲಾಶ್’ ವಸತಿ ಸಮುಚ್ಚಯದಲ್ಲಿ ಗೃಹಪ್ರವೇಶ

0

ಮಂಗಳೂರು: ಭಾರ್ಗವಿ ಬಿಲ್ಡರ್ಸ್ ಅವರಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ `ಕೈಲಾಶ್’ ವಸತಿ ಸಮುಚ್ಚಯದಲ್ಲಿ ಗುಣನಾಥ-ಶಿಲ್ಪಾ ದಂಪತಿಯ ಮೋಕ್‌ಅಪ್ ಫ್ಲ್ಯಾಟ್ ಉದ್ಘಾಟನೆ ನೆರವೇರಿತು.


ದುಬೈಯಲ್ಲಿದ್ದ ಗುಣನಾಥ್ ಊರಿಗೆ ಬಂದು ಮಂಗಳೂರಿನಲ್ಲಿ ಸ್ವಂತ ಮನೆ ಖರೀದಿಗೆ ಹುಡುಕಾಡಿ ಕೈಲಾಶ್ ವಸತಿ ಸಮುಚ್ಚಯದಲ್ಲಿ ಮನೆ ಬುಕ್ಕಿಂಗ್ ಮಾಡಿದ್ದರು.
ಕ್ರೆಡೈನ ಅಧ್ಯಕ್ಷ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಭಾರ್ಗವಿ ಬಿಲ್ಡರ್ಸ್‌ನ ಕೈಲಾಶ್ ವಸತಿ ಸಮುಚ್ಚಯದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಅಂತರ್ರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ. ಆದಷ್ಟು ಶೀಘ್ರದಲ್ಲಿ ಎಲ್ಲ ಮನೆಗಳು ಮಾರಾಟವಾಗಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.


ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್‌ನ ಅಧ್ಯಕ್ಷ ರವಿ ಶೆಟ್ಟಿ ಅತಿಥಿಯಾಗಿದ್ದರು. ಗುಣನಾಥ್(ಅರವಿಂದ ಬೋಳಾರ್) ಮಾತನಾಡಿ, ಕೈಲಾಶ್‌ನಲ್ಲಿ ಸುಂದರ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿ ಮನೆಗಳು ನಿರ್ಮಾಣವಾಗುತ್ತಿವೆ. ಇಲ್ಲಿ ನೆಲೆಸುವ ಎಲ್ಲರಿಗೂ ಶಾಂತಿ, ನೆಮ್ಮದಿ ಸಿಗುವುದರಲ್ಲಿ ಸಂಶಯವಿಲ್ಲ ಎಂದರು.


ಪ್ರೊಜೆಕ್ಟ್ ಹೆಡ್ ಗುರುದತ್ ಶೆಣೈ ಯೋಜನೆಯ ಹಾಗೂ ಗುಣನಾಥ್ ಅವರ ಮನೆಯ ಮಾಹಿತಿ ನೀಡಿದರು. ಶಿಲ್ಪಾ ಗುಣನಾಥ್(ಚೈತ್ರಾ ಶೆಟ್ಟಿ), ಭಾರ್ಗವಿ ಬಿಲ್ಡರ್ಸ್‌ನ ಮಾಲೀಕ ಭಾಸ್ಕರ್ ಗಡಿಯಾರ್, ಪಾಲುದಾರೆ ಭಾರ್ಗವಿ ಗಡಿಯಾರ್, ಪ್ರೊಜೆಕ್ಟ್ ಹೆಡ್‌ಗಳಾದ ಮಂಗಳದೀಪ್ ಹಾಗೂ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಅತ್ಯಾಧುನಿಕ ಸೌಲಭ್ಯಗಳು:
ರೂಫ್‌ಟಾಪ್‌ನಲ್ಲಿ ಸ್ವಿಮ್ಮಿಂಗ್ ಪೂಲ್, ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನೇಶಿಯಂ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ವಿಶಾಲ ಪ್ರದೇಶ, ಮಕ್ಕಳಿಗೆ ಆಟದ ಪ್ರದೇಶ, ಗ್ರಂಥಾಲಯ, ಯೋಗ ಪೆವಿಲಿಯನ್, ವಿಸಿಟರ್ಸ್ ಲಾಬಿ, ಇಂಟರ್‌ಕಾಮ್ ಲಾಬಿ, ಸೋಲಾರ್ ಪ್ಯಾನೆಲ್ಸ್, ರೆಕ್ಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ೩ ಅಟೋಮ್ಯಾಟಿಕ್ ಎಲೆವೇಟರ್ಸ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.


ಭಾರ್ಗವಿ ಬಿಲ್ಡರ್ಸ್ ಈಗಾಗಲೇ ೫ ವಸತಿ ಸಮುಚ್ಚಯ ಹಾಗೂ ೧ ವಾಣಿಜ್ಯ ಸಮುಚ್ಚಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಪಾರ್ಟ್‌ಮೆಂಟ್ ಬುಕ್ಕಿಂಗ್‌ಗಾಗಿ ಗ್ರಾಹಕರು ಕೊಟ್ಟಾರದಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆ ಕಚೇರಿ ಸಂಪರ್ಕಿಸಬಹುದು. ಮಾಹಿತಿಗೆ www.bhargavi & It:www.bhargavi/builders.comಗೆ ಭೇಟಿ ನೀಡಬಹುದು ಅಥವಾ ೯೬೧೧೭೩೦೫೫೫/೭೦೯೦೯೩೩೯೦೦ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.

ಮಂಗಳೂರಲ್ಲೇ ಮೊದಲು:
ಭಾರ್ಗವಿ ಬಿಲ್ಡರ್ಸ್‌ನ `ಕೈಲಾಶ್’ ಅತ್ಯಾಧುನಿಕ ವ್ಯವಸ್ಥೆಯ
ಅಪಾರ್ಟ್‌ಮೆಂಟ್‌ಗೆ ಕೊಟ್ಟಾರದಲ್ಲಿ ೨೦೨೧ ಫೆ.೧೪ರಂದು ಶಿಲಾನ್ಯಾಸ ನಡೆದಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಸೌಲಭ್ಯ ದೊರೆಯಲಿದೆ. ಇಂತಹ ಸೌಲಭ್ಯಗಳು ಮಂಗಳೂರು ನಗರದಲ್ಲಿ ಈ ಯೋಜನೆಯಲ್ಲಿ ಮೊದಲ ಬಾರಿಗೆ ಲಭಿಸುತ್ತಿದೆ. ರೂಫ್‌ಟಾಪ್‌ನಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣವಾಗುತ್ತಿದೆ. ೧೫ ಮಹಡಿಗಳಲ್ಲಿ ೧೩೧
ಅಪಾರ್ಟ್‌ಮೆಂಟ್‌ಗಳು ವಾಸ್ತು ಪ್ರಕಾರವಾಗಿ ನಿರ್ಮಾಣಗೊಳ್ಳುತ್ತಿದೆ. ೨ ಬಿಎಚ್‌ಕೆ ಫ್ಲ್ಯಾಟ್‌ಗೆ ೬೭ ಲಕ್ಷ ರೂ., ೪ ಬಿಎಚ್‌ಕೆ ಡ್ಯುಪ್ಲೆಕ್ಸ್ ಫ್ಲ್ಯಾಟ್‌ಗೆ ೧.೮೦ ಕೋಟಿ ರೂ. ಮತ್ತು ೩ ಬಿಎಚ್‌ಕೆ ಫ್ಲ್ಯಾಟ್‌ಗೆ ೧.೧೦ ಕೋಟಿ ರೂ. ನಿಗದಿಪಡಿಸಲಾಗಿದೆ.

LEAVE A REPLY

Please enter your comment!
Please enter your name here