ಆಲಂಕಾರು ಜೇಸಿಐ ವತಿಯಿಂದ ಮಹಿಳಾ ದಿನಾಚರಣೆ, ಸನ್ಮಾನ

0

ರಾಮಕುಂಜ: ಪ್ರತಿಷ್ಠಿತ ಜೇಸಿಐ ಆಲಂಕಾರು ಘಟಕದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮಾಹಿತಿ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮ ರಾಮಕುಂಜ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಉದ್ಘಾಟಿಸಿದರು. ಜೇಸಿಐ ವಲಯ ತರಬೇತುದಾರರಾದ ಹೇಮಲತಾ ಪ್ರದೀಪ್, ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಉಮಾವತಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ನಾಟಿವೈದ್ಯೆ ಜಾನಕಿ ಕನೆಮಾರು ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಜೇಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿದರು. ಮಹಿಳಾ ಜೇಸಿ ಅಧ್ಯಕ್ಷೆ ಜಯಶ್ರೀ ಅಲೆಪ್ಪಾಡಿ ವಂದಿಸಿದರು. ವಲಯ ತರಬೇತುದಾರ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ, ಕಾರ್ಯಕ್ರಮ ನಿರ್ದೇಶಕಿ ವಸಂತಿ ಕನೆಮಾರು, ದೇವಕಿ ಹಿರಿಂಜ, ರಾಮಕುಂಜ ಗ್ರಾ.ಪಂ.ಸದಸ್ಯೆ ಸುಚೇತಾ, ಅಂಗನವಾಡಿ ಕಾರ್ಯಕರ್ತೆರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here