ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ರಾಮಕುಂಜ: ಮಾ.29ರಿಂದ ಎ.3ರ ತನಕ ನಡೆಯುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಮಾ.12ರಂದು ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಊರಿನ ಭಕ್ತರ ಸಹಕಾರದೊಂದಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಸುಮಾರು 1.50 ಕೋಟಿ ರೂ., ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎಂದಿನಂತೆ ನಡೆಸಲು ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ ಎಂದರು.

ಅರ್ಚಕ ಮಹಾಬಲ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿನಯ ಕುಮಾರ್ ರೈ ಕೊಯಿಲಪಟ್ಟೆ, ಮುರಳಿಕೃಷ್ಣ ಕೆ ಬಡಿಲ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ ಕೊನೆಮಜಲು, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಆನೆಗುಂಡಿ, ಉಪಾಧ್ಯಕ್ಷರಾದ ಭವಾನಿಶಂಕರ ಗೌಡ ಪರಂಗಾಜೆ, ಬಾಲಕೃಷ್ಣ ಗೌಡ ಬೆಂಗದಪಡ್ಪು, ಕಾರ್ಯದರ್ಶಿಗಳಾದ ಶಶಿಕುಮಾರ್ ಅಂಬಾ, ರಾಧಾಕೃಷ್ಣ ನಾಯ್ಕ ತುಂಬೆತಡ್ಕ, ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ರೈ ಬುಡಲೂರು, ಧರ್ಣಪ್ಪ ಗೌಡ ಕೋರಿಕ್ಕಾರು, ಮೋಹನ್ ದಾಸ್ ಶೆಟ್ಟಿ ಬಡಿಲ, ರಾಜೀವ ಪೊಸಲಕ್ಕೆ, ರುಕ್ಮಯ್ಯ ಪಲ್ಲಡ್ಕ, ದಾಮಣ್ಣ ಗೌಡ ಕಾಯರಟ್ಟ, ಗ್ರಾ,ಪಂ ಸದಸ್ಯ ಚಿದಾನಂದ ಪಾನೀಯಾಲ್ ಸೇರಿದಂತೆ ವಿವಿಧ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here