ಪುತ್ತೂರು: ಪಡುವನ್ನೂರು ಗ್ರಾಮದ ಪಡುಮಲೆ ಜುಮಾ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಆಂಡ್ ನೇರ್ಜೆ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮಾ.17 ರಿಂದ 18ರ ತನಕ ನಡೆಯಲಿದೆ ಎಂದು ಪಡುಮಲೆ ಜುಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಐತಿಹಾಸಿಕ ಕಾರಣಿಕ ಪುರುಷರಾದ ಕೋಟಿಚೆನ್ನಯರು ಹುಟ್ಟಿದ ಊರು ಪಡುಮಲೆ ಆಗಿದೆ. ವಿಶೇಷವಾಗಿ ಪಡುಮಲೆ ಮಸೀದಿಗೆ ಸುಮಾರು 800 ವರ್ಷಗಳ ಇತಿಹಾಸವಿದೆ. ಆಗಿನ ಕಾಲಗಟ್ಟದಲ್ಲಿ ಹತ್ತಿರದಲ್ಲಿ ಯಾವುದೇ ಮಸೀದಿಗಳಿರಲಿಲ್ಲ. ಆ ಸಂದರ್ಭದಲ್ಲಿ ಎಲ್ಲರು ಪಡುಮಲೆ ಮಸೀದಿಯ ಸಾನಿಧ್ಯ ಬಯಸುತ್ತಿದ್ದರು. ಅಂತಹ ಪವಿತ್ರವಾದ ಕ್ಷೇತ್ರದಲ್ಲಿ ಮಾ.17 ರಿಂದ 18ರ ತನಕ ಮೂರು ದಿನಗಳ ಕಾಲ ಧಾರ್ಮಿಕ ನಾಯಕರಿಂದ ಪ್ರಭಾಷಣ ನಡೆಯಲಿದ್ದು, ಅಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭವಾರ ಹೆಸರಿನಲ್ಲಿ ಅಂಡ್ ನೇರ್ಚೆ ಎಂಬ ಧಾರ್ಮಿಕ ಉತ್ಸವ ನಡೆಯಲಿದೆ ಎಂದ ಅವರು ಮಾ.17ರಂದು ರಾತ್ರಿ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಯಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ಉದ್ಘಾಟನೆ ಮತ್ತು ಆಶೀರ್ವಚನ ಮಾಡಲಿದ್ದಾರೆ. ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಅವರು ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಮಾ.18ರಂದು ರಾತ್ರಿ ಬಹು | ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಅವರು ಪ್ರಭಾಷಣ ಮಾಡಲಿದ್ದಾರೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.
ಮಾ.19ಕ್ಕೆ ಸಂಜೆ ಸೌಹಾರ್ದ ಸಂಗಮ, ರಾತ್ರಿ ಸಮಾರೋಪ:
ಮಾ.19ರಂದು ಸಂಜೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ರಮಾನಾಥ ರೈ, ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರೈ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಶೋಕ್ ಕುಮಾರ್ ರೈ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಮಾಜಿ ಉಪ ಪ್ರದಾನರಾದ ಬಾಲಕೃಷ್ಣ ಐ ಕುದ್ಕಾಡಿ, ಬುಶ್ರಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಅಝೀಝ್, ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಬಡಗನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕ್ಕಾಡಿ, ಉಪಾಧ್ಯಕ್ಷ ಸಂತೋಷ್ ಆಳ್ವ, ಉದ್ಯಮಿ ಅಬ್ದುಲ್ ಖಾದರ್ ಮೇರ್ಲ, ಹನೀಫ್ ಮಾಡಾವು, ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ್ ರೈ, ಸದಸ್ಯ ಧರ್ಮೇಂದ್ರ ಪದಡ್ಕ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸಮಾರೋಪ ಸಮಾರಂಭದಲ್ಲಿ ಬಹು | ಸಯ್ಯದ್ ರಶೀದ್ ಅಲಲಿ ಶಿಹಾಬ್ ತಂಙಳ್, ಪಣಕ್ಕಾಡ್ ಅವರು ದುವಾಶೀರ್ವಚನ ಮತ್ತು ಕೂಟ್ ಪ್ರಾರ್ಥನೆಯ ನೇತೃತ್ವ ವಹಿಸಲಿದ್ದಾರೆ. ಬಹು| ಇ.ಪಿ ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಡುಮಲೆ ಮಸೀದಿ ಖತೀಬರಾದ ಬಹು| ಶಂಸುದ್ದೀನ್ ದಾರಿಮಿ, ಜಮಾಅತ್ ಕಮಿಟಿ ಉಪಾಧ್ಯಕ್ಷ ಪಕ್ರುದ್ದೀನ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಲಿಹಾಜಿ ಪಿಲಿಪುಡೆ ಮತ್ತು ಮಾಜಿ ಕೋಶಾಧಿಕಾರಿ ಆದಂ ಹಾಜಿ ಉಪಸ್ಥಿತರಿದ್ದರು.
ಸಮಾರೋಪದ ದಿನ ರಾತ್ರಿ ಅನ್ನದಾನ
ಪ್ರತಿ ದಿನ ರಾತ್ರಿ ಗಂಟೆ 7 ರಿಂದ ಮದ್ರ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ನಡೆಯಲಿದೆ. ಮಾ.19ಕ್ಕೆ ಅಸರ್ ನಮಾಜಿನ ಬಳಿಕ ಮೌಲೂದ್ ಪಾರಾಯಣ ನಡೆಯಲಿದೆ. ಎಲ್ಲಾ ಕಾರ್ಯಕ್ರಮದಲ್ಲಿ ಸ್ತ್ರಿಯರಿಗೆ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಲಾಗಿದ್ದು, ಪ್ರತಿ ದಿನ ಸಿರಣಿ ವಿತರಣೆ ನಡೆಯಲಿದ್ದು, ಸಮಾರೋಪ ಸಮಾರಂಭದ ದಿನ ರಾತ್ರಿ ಗಂಟೆ 7 ರಿಂದ 10ರ ತನಕ ಅನ್ನದಾನ ನಡೆಯಲಿದೆ.
ಮಹಮ್ಮದ್ ಬಡಗನ್ನೂರು, ಅಧ್ಯಕ್ಷರು ಜಮಾಅತ್ ಕಮಿಟಿ