ಕಿರು ಹೆಜ್ಜೆಗಳಲ್ಲಿ ಸಾಧನೆಯ‌ ಮೆಟ್ಟಿಲೇರುತ್ತಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್

0

ಶಿಕ್ಷಣವೆಂಬುದು ಕೇವಲ ಪಠ್ಯಪುಸ್ತಕವಲ್ಲ. ಬದಲಾಗಿ ಮಗುವಿನ ದೈಹಿಕ, ಮಾನಸಿಕ ವಿಕಸನಕ್ಕೆ ಪೂರಕವಾದ ಬೌದ್ಧಕತೆಯನ್ನು ನೀಡಿ ಸಮಾಜದ ಸತ್ಪ್ರಜೆಯಾಗಿ ರೂಪಿಸುವುದೇ ನಿಜ ಶಿಕ್ಷಣ. ಈ ಉದ್ದೇಶವಿರಿಸಿಕೊಂಡು ಮುನ್ನಡೆಯುತ್ತಿರುವ ವಿದ್ಯಾ ಕೇಂದ್ರಗಳ ಪೈಕಿ ಪುತ್ತೂರಿನಲ್ಲಿ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಒಂದಾಗಿದ್ದು, ಶೈಶಾವಸ್ಥೆಯಲ್ಲಿಯೇ ಸಂಸ್ಥೆಯು ಬೆಳವಣಿಗೆಯ ಪಥದಲ್ಲಿ ದಾಪುಗಾಲು ಇರಿಸಿದೆ.

ಬೆಳೆದುಬಂದ ಕಿರು ಹಾದಿ: 2020 ರಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು 2021ನೇ ಇಸವಿಯ ನವಂಬರ್ 3 ರಂದು ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಾಲೆಯ ಹೊಸ ಕಟ್ಟಡವನ್ನು ಲೋಕಾರ್ಪಣೆಗೈದರು. ಮಕ್ಕಳ ದೈನಂದಿನ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಅವರ ವೈಜ್ಞಾನಿಕ, ಸಾಂಸ್ಕೃತಿಕ, ಧಾರ್ಮಿಕ, ಆಟೋಟ ಇತ್ಯಾದಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆ, ತಾಲೂಕು, ರಾಜ್ಯ, ರಾಷ್ಟ್ರ ಹಾಗೂ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವುದು ಸಂಸ್ಥೆಯ ಉದ್ದೇಶದಲ್ಲಿ ಸಫಲತೆಯನ್ನು ಕಾಣುತ್ತಿದೆ.
ಸಂಸ್ಥೆಯ ಸಾಧನೆಗಳು ಮೊದಲನೇ ವರ್ಷದಲ್ಲಿಯೇ, ನಾಲ್ಕು ಮಂದಿ ವಿದ್ಯಾರ್ಥಿಗಳು INSPIRE AWARD ಹಾಗೂ ಓರ್ವ ರಾಷ್ಟ್ರ ಮಟ್ಟದಲ್ಲಿ INSEF ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡನೇ ವರ್ಷದಲ್ಲಿ, ವಿದ್ಯಾರ್ಥಿಗಳಿಗೆ INSEF ಪ್ರಶಸ್ತಿ ಹಾಗೂ ರಾಷ್ಟ್ರಮಟ್ಟದ IRIS ಸ್ಪರ್ಧೆಗೆ ಮೂರು ಮಕ್ಕಳು ಭಾಗವಹಿಸಿದ ಹಿರಿಮೆ ಸಂಸ್ಥೆಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ INSEF ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ, ವಿದ್ಯಾಭಾರತಿ ವತಿಯಿಂದ ನಡೆದ ಚೆಸ್, ಈಜು, ಕರಾಟೆ, ವಿಜ್ಞಾನ ಮೇಳ, ಕ್ರೀಡಾಕೂಟ, ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಇತ್ಯಾದಿ ಬಹುಮಾನಗಳನ್ನು ರಾಜ್ಯಮಟ್ಟ, ರಾಷ್ಟ್ರಮಟ್ಟಗಳಲ್ಲಿ ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ THE HINDU ಪತ್ರಿಕೆಯವರು ನಡೆಸಿದ ಅಂತರ್ ಶಾಲಾ ವಿಜ್ಞಾನ ಮೇಳದಲ್ಲಿ ನಡೆದ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ಮೇಳಗಳು:
ಶಿಕ್ಷಣ‌ ಕೇಂದ್ರದಲ್ಲಿ ಆವಿಷ್ಕಾರ್ 2k22 ಆಯೋಜಿಸುವ ಮೂಲಕ ಪುತ್ತೂರಿನ ಸುತ್ತುಮುತ್ತಲಿನ ವಿದ್ಯಾರ್ಥಿಗಳಿಗಾಗಿ IISER ಪುಣೆಯ ಸಂಪನ್ಮೂಲ ವ್ಯಕ್ತಿಗಳಿಂದ ಮೂಲ ವಿಜ್ಞಾನಗಳ ಪ್ರಯೋಗಗಳ ಪ್ರದರ್ಶನ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಾತ್ರವಲ್ಲದೆ, INSEF ವಿಜ್ಞಾನ ಮೇಳವನ್ನು ಆಯೋಜನೆ ಮಾಡಿದ ಗೌರವಕ್ಕೂ ಪಾತ್ರವಾಗಿದೆ. ಇತ್ತೀಚೆಗೆ ಮೂಡಬಿದ್ರೆಯಲ್ಲಿ ನಡೆದ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದೂ ಅಲ್ಲದೆ, ಅಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ದಿನದ ಅಂಗವಾಗಿ IISER ಪುಣೆಯವರು ನಡೆಸಿದ ವಿಜ್ಞಾನ ಪ್ರಯೋಗ ಮೇಳದಲ್ಲಿ ಇಲ್ಲಿಯ ಮಕ್ಕಳ ವಿಜ್ಞಾನ ಪ್ರಯೋಗಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ಭಾಗವಹಿಸುವ ಸದವಕಾಶವನ್ನು ಹೊಂದಿರುತ್ತಾರೆ.

‘ಕೆಳದಿ‌ ಚೆನ್ನಮ್ಮ’ ಪ್ರಶಸ್ತಿ
ಇಲ್ಲಿಯ ವಿದ್ಯಾರ್ಥಿನಿಯು ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಕೊಡಮಾಡುವ ‘ಕೆಳದಿ ಚೆನ್ನಮ್ಮ’ ಪ್ರಶಸ್ತಿಗೆ ಭಾಜನರಾಗಿರುವುದು, ಸಂಸ್ಥೆಯ ಗರಿಮೆಗಳಲ್ಲೊಂದು. ಅಲ್ಲದೆ ಇತ್ತೀಚೆಗೆ ಅದೇ ವಿದ್ಯಾರ್ಥಿನಿಯು ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಚಿನ್ನದ ಪದಕ ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಪಠ್ಯೇತರ ತರಬೇತಿಗಳು
ಇಲ್ಲಿ ಪಠ್ಯ ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ, ಸಂಗೀತ, ನೃತ್ಯ, ತಬಲ, ಕೀ ಬೋರ್ಡ್ ಗಳಂತಹ ಸಂಗೀತವಾದ್ಯಗಳು, ಇತ್ಯಾದಿಗಳನ್ನೂ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದ್ದು ಹೆಚ್ಚಿನ ಮಕ್ಕಳು ಇವುಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮಕ್ಕಳ ಕಲಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಂಪೂರ್ಣ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.

ಇತರೇ ಸೌಲಭ್ಯಗಳು
ಕಲಿಕಾ ವಿಷಯಗಳಲ್ಲಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಹೆಚ್ಚುವರಿ ತರಗತಿಗಳನ್ನು ನಡೆಸಿ, ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ.
ಶಾಲೆಯಲ್ಲಿರುವ ಎಲ್ಲಾ ವಿಷಯಗಳ ಸುಸಜ್ಜಿತ ಪ್ರಯೋಗಾಲಯಗಳ, 3D ಸೈನ್ಸ್ ಪಾರ್ಕ್, ಆಂಫಿ ಥಿಯೇಟರ್ ಇತ್ಯಾದಿಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಪಡೆಯುತ್ತಿದ್ದಾರೆ. ಕೆ. ಜಿ. ತರಗತಿಗಳಲ್ಲಿ ಪುಟ್ಟ ಮಕ್ಕಳ ಬಗ್ಗೆ ಹೆಚ್ಚುವರಿ ನಿಗಾವಹಿಸಲೋಸುಗ 15 ಮಕ್ಕಳಿಗೆ ಒಬ್ಬರಂತೆ ಶಿಕ್ಷಕ/ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆಸಕ್ತ ಮಕ್ಕಳಿಗಾಗಿ ಶುಚಿ ರುಚಿಯಾದ ಮಧ್ಯಾಹ್ನ ಭೋಜನ ವ್ಯವಸ್ಥೆ ಹಾಗೂ ಮಕ್ಕಳಿಗಾಗಿ ಸುಸಜ್ಜಿತ ಹಾಗೂ ಸುರಕ್ಷಿತ ಬಸ್ಸುಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಜಾದಿನಗಳ ಸದ್ಬಳಕೆಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ.

ಮೌಲ್ಯಾಧಾರಿತ ತರಗತಿ
ಮಕ್ಕಳ ಮುಂದಿನ ಉನ್ನತ ಶಿಕ್ಷಣದ ಹಾದಿಯಲ್ಲಿ ನಡೆಯುವ, JEE, NEET ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತಯಾರಿಗಾಗಿ ಹಾಗೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಇಲ್ಲಿಯ ಎಂಟನೇ ತರಗತಿ ಮತ್ತು ಮೇಲಿನ ತರಗತಿಯ ಹಾಗೂ ಸೇರಲಿಚ್ಛಿಸುವ ಇತರ ಶಾಲೆಯ ಮಕ್ಕಳಿಗೆ ನುರಿತ ಬೋಧಕ ವರ್ಗದಿಂದ, ಆಯ್ದ ಪಠ್ಯ ವಿಷಯಗಳ ಕುರಿತು ವಾರಕ್ಕೊಮ್ಮೆ ‘ಸಾಧನಾ’ ಎಂಬ ಮೌಲ್ಯಾಧಾರಿತ ತರಗತಿಯನ್ನು ನಡೆಸಲಾಗುತ್ತಿದೆ. ಮುಂದಿನ ಹಂತವಾಗಿ ಈ ಕ್ಲಾಸ್ ಗಳನ್ನು ಆರನೇ ತರಗತಿಯಿಂದಲೇ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಆಂತರಿಕ, ಬೌದ್ಧಿಕ ಹಾಗೂ ಶಾರೀರಿಕ ಆರೋಗ್ಯಕರ ಬೆಳವಣಿಗೆಗಾಗಿ ಯೋಗ ತರಗತಿ ನಡೆಯಲಿದೆ. ಜ್ಞಾನವೃದ್ಧಿಗಾಗಿ ಆಯಾಯ ಕಾಲಕ್ಕನುಗುಣವಾಗಿ, ಬೋಧಕ ವರ್ಗಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗಳನ್ನು ನೀಡಲಾಗುತ್ತಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡುತ್ತಾ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಸದುಪಯೋಗವನ್ನು ಆಸಕ್ತ ಪೋಷಕರು ಪಡೆದುಕೊಳ್ಳಬಹುದಾಗಿದೆ.
ಸಂಪರ್ಕಕ್ಕಾಗಿ: 7204471639

ಮಕ್ಕಳ ಮುಂದಿನ ಉನ್ನತ ಶಿಕ್ಷಣದ ಹಾದಿಯಲ್ಲಿ ನಡೆಯುವ, JEE, NEET ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತಯಾರಿಗಾಗಿ ಹಾಗೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, 8 ನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟ ಹಾಗೂ ಸೇರಲಿಚ್ಛಿಸುವ ಇತರ ಶಾಲೆಯ ಮಕ್ಕಳಿಗೆ ನುರಿತ ಬೋಧಕ ವರ್ಗದಿಂದ, ಆಯ್ದ ಪಠ್ಯ ವಿಷಯಗಳ ಕುರಿತು ವಾರಕ್ಕೊಮ್ಮೆ ‘ಸಾಧನಾ’ ಎಂಬ ಮೌಲ್ಯಾಧಾರಿತ ತರಗತಿಯನ್ನು ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here