ಶ್ರೀದುರ್ಗಾಲಕ್ಷ್ಮೀ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಕಿ ಸ್ಕೀಂ ಕೊಡುಗೆ ; ಬಂಪರ್ ಡ್ರಾ ಮೂಲಕ ವಿಜೇತರಿಗೆ ಚಿನ್ನದ ಮಾಲೆ

0

ಹೊಸ ಸದಸ್ಯರನ್ನೊಳಗೊಂಡ ಸ್ಕೀಂ ಏಪ್ರಿಲ್ ತಿಂಗಳಿಂದ ಆರಂಭ.
ಕಂತು ಮೊತ್ತ ರೂ.500 ಹಾಗೂ 1 ಸಾವಿರ.
ಪ್ರತಿ ತಿಂಗಳೂ ಕೂಡ ಡ್ರಾ ವಿದ್ದು ವಿಜೇತರಿಗೆ 1-12 ಸಾವಿರ ರೂ.ಬೆಲೆಯ ಆಭರಣ.
ಬಂಪರ್ ಡ್ರಾ. ಮೂಲಕ ಅರ್ಧ ಪವನ್ ಹಾಗೂ ಒಂದು ಪವನ್ ಚಿನ್ನ.
ಹೆಚ್ಚು ಮಾಹಿತಿಗಾಗಿ 9844452221.

ಪುತ್ತೂರು : ಕೋರ್ಟುರೋಡ್ ಮುಖ್ಯರಸ್ತೆಯ ಅನಂತ ಗಣೇಶ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ದುರ್ಗಾಲಕ್ಷ್ಮೀ ಜ್ಯುವೆಲ್ಲರ‍್ಸ್‌ನಲ್ಲಿ ಮಾ.15ರಂದು ಬಂಪರ್ ಡ್ರಾ ಮೂಲಕ, ವಿಜೇತರಿಗೆ ಚಿನ್ನದ ಮಾಲೆ ಕೊಡುಗೆ ಕಾರ್ಯಕ್ರಮ ನೆರವೇರಿತು. ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಡ್ರಾ ನೆರವೇರಿಸಿ ವಿಜೇತರಿಗೆ ಹಾರೈಸಿದರು.

ಈ ವೇಳೆ ನರೇಂದ್ರ ನಾಯಕ್ ಕೋರ್ಟುರೋಡ್, ಜಯರಾಜ್, ಸಂಸ್ಥೆಯ ಮಾಲಕ ಶಿವಾಜಿ ಮಾರುತಿ ಸುರ್ವೆ, ಸುನೀತಾ ಶಿವಾಜಿ ಸುರ್ವೆ ದಂಪತಿ, ಮಕ್ಕಳಾದ ದುರ್ಗಾ ಶಿವಾಜಿ ಸುರ್ವೆ, ಲಕ್ಷ್ಮೀ ಶಿವಾಜಿ ಸುರ್ವೆ, ಶೌರ್ಯ ಶಿವಾಜಿ ಸುರ್ವೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಮಾಲಕ ಶಿವಾಜಿ ಸುರ್ವೆ ಮಾತನಾಡಿ, ಆಭರಣ ಪ್ರಿಯರಿಗಾಗಿ ನಾವು ಎ ಹಾಗೂ ಬಿ ಎಂಬ ಗ್ರೂಪ್ ರಚನೆ ಮಾಡಿ ಪ್ರತಿ ತಿಂಗಳೂ 500 ಮತ್ತು 1000 ರೂ. ಮೊತ್ತದ ಸ್ಕೀಂ ಆರಂಭಿಸಿ, ಪ್ರತಿ ತಿಂಗಳು ಕೂಡ ಡ್ರಾ ನಡೆಸಿ ಎ ಮತ್ತು ಬಿ ಗ್ರೂಪ್‌ನ ವಿಜೇತ ಗ್ರಾಹಕರಿಗೆ 6 ಮತ್ತು 12 ಸಾವಿರ ರೂಪಾಯಿ ಬೆಲೆಯ ಆಭರಣ ನೀಡುತ್ತೇವೆ. ವಿಜೇತ ಗ್ರಾಹಕರು ಮುಂದಿನ ಕಂತು ಕಟ್ಟಬೇಕಾಗಿರುವುದಿಲ್ಲ.

ಕೊನೆಗೆ ಬಂಪರ್ ಡ್ರಾ ಮೂಲಕ ಎರಡೂ ಗ್ರೂಪಿನಲ್ಲೂ ತಲಾ ಒಬ್ಬರನ್ನು ಕಾಯಿನ್ ಎತ್ತುವ ಮೂಲಕ ಆಯ್ಕೆ ಮಾಡಿ ಡ್ರಾ ವಿಜೇತ ಅದೃಷ್ಟವಂತರಿಗೆ ಅರ್ಧ ಪವನ್ ಹಾಗೂ ಒಂದು ಪವನ್ ಚಿನ್ನದ ಸರವನ್ನು ಬಹುಮಾನವಾಗಿ ನೀಡುತ್ತೀದ್ದೇವೆ. ಏಪ್ರಿಲ್ ಒಂದರಿಂದ ಹೊಸ ಸ್ಕೀಂ ಆರಂಭಗೊಳ್ಳಲಿದೆ. ಆಸಕ್ತ ಗ್ರಾಹಕರು ಸ್ಕೀಂನ ಲಾಭ ಪಡೆಯುವಂತೆ ಕೋರಿ ವಂದಿಸಿದರು.

LEAVE A REPLY

Please enter your comment!
Please enter your name here