ಪುತ್ತೂರು: ಫಿಲೋಮಿನಾ ಕಾಲೇಜು ಪುತ್ತೂರು ಇದರ 2014-17 ಸಾಲಿನ ಹಳೆ ವಿದ್ಯಾರ್ಥಿಗಳು ರಚಿಸಿರುವ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಬಾತಿಶಾ ಆತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಬಿ.ಸಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮಹಮ್ಮದ್ ಸಲೀತ್, ಉಪಾಧ್ಯಕ್ಷರಾಗಿ ಆಶಿಕ್ ಕಲ್ಲರ್ಪೆ, ಕೋಶಾಧಿಕಾರಿಯಾಗಿ ಬಾತಿಶಾ ಕಾವು, ಜೊತೆ ಕಾರ್ಯದರ್ಶಿಯಾಗಿ ರಮೀಝ್ ಉಬಾರ್, ಸಂಘಟನಾ ಕಾರ್ಯದರ್ಶಿಯಾಗಿ ಅಡ್ವಕೇಟ್ ನಾಸಿರ್ ಬಪ್ಪಳಿಗೆ, ಮಾದ್ಯಮ ಕಾರ್ಯದರ್ಶಿಯಾಗಿ ಪತ್ರಕರ್ತ ನವಾಝ್ ವಿಟ್ಲ, ಎನ್‌ಆರ್‌ಎಸ್ ಕಾರ್ಯದರ್ಶಿಯಾಗಿ ತಬ್ಶೀರ್ ಇರ್ದೆ, ಬಿಕಾಂ ಕಾರ್ಯದರ್ಶಿಯಾಗಿ ಅಶ್ರಫ್ ಪಲ್ಲತ್ತೂರು, ಬಿ.ಎ ಕಾರ್ಯದರ್ಶಿಯಾಗಿ ಸಿನಾನ್ ಸಂಪ್ಯ, ಬಿಬಿಎಂ ಕಾರ್ಯದರ್ಶಿಯಾಗಿ ಹಾಸೀಮ್ ಅಡ್ಕಾರ್ ಆಯ್ಕೆಯಾದರು.
ಐಬಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಧನ ಸಹಾಯ, ಬಡ, ನಿರ್ಗತಿಕರಿಗೆ ಆಹಾರ ಕಿಟ್, ಶೆಕ್ಷಣಿಕ ಸಹಾಯ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.