ಬೊಳುವಾರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾಗದಲ್ಲಿ ಭಜನೆ, ಆಶ್ಲೇಷ ಬಲಿ ,ಧರ್ಮಜಾಗೃತಿ ಸಭೆಗೆ ಸ್ವಚ್ಛತಾ ಕಾರ್ಯ

0

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿ ಪುತ್ತೂರಿನ ಬೊಳುವಾರಿನಲ್ಲಿರುವ ಜಮೀನಿನಲ್ಲಿ ಮಾ.24ರಂದು ನಡೆಯಲಿರುವ ಭಜನೆ, ಆಶ್ಲೇಷ ಬಲಿ, ಧರ್ಮಜಾಗೃತಿ ಸಭೆಗೆ ಪೂರ್ವ ಸಿದ್ಧತೆಯಾಗಿ ಮಾ.16ರಂದು ಸ್ವಚ್ಛತಾ ಕಾರ್ಯವು ಹಿಂದು ಜಾಗಾರಣ ವೇದಿಕೆಯ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಹಿಂಜಾವೇಯ ಪ್ರಮುಖರಾದ ಚಿನ್ಮಯ್ ರೈ, ಅಜಿತ್ ರೈ, ನರಸಿಂಹ, ಕೆದಿಲ ಗಣರಾಜ್ ಭಟ್, ಪ್ರಸಾದ್ ಶೆಟ್ಟಿ, ರಾಜೇಶ್ ಪಂಚೋಡಿ, ದಿನೇಶ್ ಪಂಜಿಗ, ಗಿತೇಶ್ ಅಜ್ಜಿಕಲ್ಲು, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಮಾಜಿ ಸದಸ್ಯ ಕಿಶೋರ್ ಶಿರಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here