ಸಂಪ್ಯ ಪೊಲೀಸರ ಕಾರ್ಯಾಚರಣೆ; ಪರ್ಪುಂಜದಲ್ಲಿ ಗಾಂಜಾ ಮಾರಾಟಗಾರನ ಬಂಧನ- ಗಾಂಜಾ, ಕಾರು ವಶಕ್ಕೆ

0

ಪುತ್ತೂರು; ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಪ್ಯ ಠಾಣಾ ಪೊಲೀಸರು ಬಂಧಿಸಿ, ಗಾಂಜಾ ಹಾಗೂ ಮಾರಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪಾಣಾಜೆ ಗ್ರಾಮದ ಬೊಳ್ಳಿಂಬಳ ಇಬ್ರಾಹಿಂ ರವರ ಪುತ್ರ ಅಬೂಬಕ್ಕರ್ ಸಿದ್ದಿಕ್(35ವ.) ಬಂಧಿತ ಆರೋಪಿ.

ಪ್ರಸ್ತುತ ಬಲ್ನಾಡು ಗ್ರಾಮದ ಸಾರ್ಯ ಮಸೀದಿಯ ಬಳಿಯಲ್ಲಿ ವಾಸ್ತವ್ಯವಿರುವ ಅಬೂಬಕ್ಕರ್ ಸಿದ್ದಿಕ್ ಮಾ.6ರಂದು ಸಂಜೆ ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ಕಾರಿನಲ್ಲಿ ಬಂದು ಗ್ರಾಹಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಸಂಪ್ಯ ಪೊಲೀಸರಯ ದಾಳಿ ನಡೆಸಿ,‌ ಗಾಂಜಾ ಮಾರಾಟ‌ ಮಾಡುತ್ತಿರುವುದನ್ನು ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿ ಆತನಲ್ಲಿದ್ದ ಸುಮಾರು ರೂ 27,000 ಮೌಲ್ಯದ 670 ಗ್ರಾಂ ಗಾಂಜಾ ಮತ್ತು ಮಾರಾಟಕ್ಕೆ ಬಳಿಸಿದ ಸುಮಾರು ರೂ 70,000ಮೌಲ್ಯದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂದನ ವಿಧಿಸಿರುತ್ತದೆ.

LEAVE A REPLY

Please enter your comment!
Please enter your name here