ಪುತ್ತೂರು: ಉಪ್ಪಳದ ಕಯ್ಯಾರು ಗ್ರಾಮದ ಕಯ್ಯಾರುಪಾದೆ ತರವಾಡು ಮನೆಯ ದೈವ ದೇವರುಗಳ ಟ್ರಸ್ಟ್ ಆಶ್ರಯದಲ್ಲಿ ಕಯ್ಯಾರುಪಾದೆ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆಪಂಜುರ್ಲಿ ಚಾವಡಿ, ಕಲ್ಲುರ್ಟಿ, ಸ್ಥಳ ಗುಳಿಗ ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಮತ್ತು ನೇಮೋತ್ಸವವು ಮಾ.22 ರಿಂದ ಆರಂಭಗೊಂಡು 24 ರ ತನಕ ವೇದಮೂರ್ತಿ ಬ್ರಹ್ಮಶ್ರೀ ಬಿ.ಎಸ್.ಎನ್.ಕಡಮಣ್ಣಾಯ ಬಂಬ್ರಾಣ ಕುಂಬ್ಳೆ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆಯನ್ನು ಮಾ.19 ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯಜಮಾನ ರಾಮಚಂದ್ರ ಅಡಪ ಕೈಕಾರ, ಟ್ರಸ್ಟ್‌ನ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರೈ ದೇಲಂಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಸೀತಾರಾಮ ರೈ ಕೈಕಾರ, ಅಧ್ಯಕ್ಷ ದೇರಣ್ಣ ಶೆಟ್ಟಿ ನಡುಬೈಲ್, ಪ್ರ.ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕುಯ್ಯಾರು, ಉಪಾಧ್ಯಕ್ಷರುಗಳಾದ ಜಯರಾಮ ಶೆಟ್ಟಿ ತಮ್ಮಣಬೆಟ್ಟು, ನಾರಾಯಣ ಶೆಟ್ಟಿ ಅಡ್ಯಾರು, ಮಹಾಬಲ ರೈ ನಾಡಿಗ್ರಾಮ, ಸತೀಶ್ ರೈ ಪೊನೊನಿ, ಗೌರವ ಸಲಹೆಗಾರರಾದ ಬಾಲಕೃಷ್ಣ ಆಳ್ವ ಕಯ್ಯಾರುಪಾದೆ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಕಯ್ಯಾರುಪಾದೆ, ಜತೆ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ರಮೇಶ್ ಶೆಟ್ಟಿ ಕಯ್ಯಾರುಪಾದೆ, ರಾಜಶೇಖರ ಶೆಟ್ಟಿ ಮುಡಾಲ, ಪದ್ಮರಾಜ್ ರೈ ಬದಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.