ಕೊಣಾಲಿನ ರಕ್ಷಾ ಯಸ್. ’ಗೋ ಫಸ್ಟ್’ ವಿಮಾನದಲ್ಲಿ ಗಗನಸಖಿಯಾಗಿ ನೇಮಕ

0

ನೆಲ್ಯಾಡಿ: ಕಡಬ ತಾಲೂಕು ಕೊಣಾಲು ಗ್ರಾಮದ ಆರ್ಲ ನಿವಾಸಿ ರಕ್ಷಾ ಯಸ್.ರವರು ’ಗೋ ಫಸ್ಟ್’ ವಿಮಾನದಲ್ಲಿ ಗಗನಸಖಿಯಾಗಿ ನೇಮಕಗೊಂಡಿದ್ದಾರೆ.

ಗಗನಸಖಿ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ರಕ್ಷಾ ಅವರು ಬಳಿಕ ಬೆಂಗಳೂರಿನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಆಯ್ಕೆಗೊಂಡಿದ್ದರು. ಆ ಬಳಿಕ 6 ತಿಂಗಳ ತರಬೇತಿ ಮುಗಿಸಿ ಈಗ ಗೋ ಫಸ್ಟ್ ವಿಮಾನದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈಕೆ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಹೈಸ್ಕೂಲ್, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಪಡೆದುಕೊಂಡಿದ್ದಾರೆ. ಈಕೆ ಕೊಣಾಲು ಗ್ರಾಮದ ಆರ್ಲ ಸುರಕ್ಷಾ ನಿಲಯದ ಸುಂದರ ಗೌಡ ಹಾಗೂ ಶ್ರೀಮತಿ ರೇವತಿ ಸುಂದರ ದಂಪತಿ ಪುತ್ರಿ. ಈಕೆಯ ಸಹೋದರ ರಕ್ಷಿತ್ ಎಸ್‌ರವರು ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here