ಮಾ 21- ಬೆಳಂದೂರಿನಲ್ಲಿ ಸಾರ್ವಜನಿಕ ಅಶ್ವತ್ಥ ವಿವಾಹದ ವಾರ್ಷಿಕೋತ್ಸವ

0

ಕಾಣಿಯೂರು: ಬೆಳಂದೂರು ಸದಾಶಿವನಗರ ಅಶ್ವಥ ವಿವಾಹ ಮಹೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಅಶ್ವಥ ವಿವಾಹದ 13ನೇ ವಾರ್ಷಿಕೋತ್ಸವವು ಮಾ 21ರಂದು ಬೆಳಂದೂರು ಸದಾಶಿವ ನಗರದಲ್ಲಿ ನಡೆಯಲಿದೆ.

ಬೆಳಿಗ್ಗೆ ಅಭಿಷೇಕ, ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಬೆಳಂದೂರು ವಲಯದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ಯಕ್ಷಗಾನ ಕಲಾವಿದರಾದ ಶ್ರೀನಿವಾಸ ರೈ ಕಡಬ, ದಿನೇಶ್ ಕೋಡಪದವು, ಪರಮೇಶ್ವರ ಗಂಗನಾಡು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಇವರಿಂದ ” ಭಂಡಾರ ಚಾವಡಿ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here