ಬೆಳಂದೂರು, ಪಳ್ಳತ್ತಾರು ಎಂ.ಜೆ.ಯಂ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಉಪ್ಪಂಞಿ ಹಾಜಿ ಬನಾರಿ, ಪ್ರ. ಕಾರ್ಯದರ್ಶಿಯಾಗಿ ಶಂಸುದ್ದೀನ್ ಬನಾರಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಕೊಡಂಕೀರಿ

ಕಾಣಿಯೂರು: ಮುಹ್ಯದ್ದೀನ್ ಜುಮ್ಮಾ ಮಸ್ಜಿದ್ ಬೆಳಂದೂರು ಪಳ್ಳತ್ತಾರು ಇದರ ವಾರ್ಷಿಕ ಮಹಾಸಭೆಯು ಮಸೀದಿಯ ಗೌರವಾಧ್ಯಕ್ಷರಾದ ಬಹು ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರ.ಕಾರ್ಯದರ್ಶಿ ನವಾಝ್ ಸಖಾಫಿ ಬೆಳಂದೂರು 2022-23 ನೇ ಸಾಲಿನ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಬಳಿಕ ನಡೆದ ಚರ್ಚಾಕೂಟದಲ್ಲಿ 2023-24ನೇ ಸಾಲಿನ ನೂತನ ಕಮೀಟಿಯನ್ನು ಅಸ್ತಿತ್ವಕ್ಕೆ ತರಲಾಯಿತು.


ಅಧ್ಯಕ್ಷರಾಗಿ ಉಪ್ಪಂಞಿ ಹಾಜಿ ಬನಾರಿ, ಉಪಾಧ್ಯಕ್ಷ ಯೂಸುಫ್ ಮುಸ್ಲಿಯಾರ್ ಗುಂಡಿನಾರ್, ಪ್ರ.ಕಾರ್ಯದರ್ಶಿ ಶಂಸುದ್ದೀನ್ ಇಂಜಿನಿಯರ್ ಬನಾರಿ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಪಲ್ಲತ್ತಾರ್, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕೊಡಂಕೀರಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕ್ಕರ್ ಹಾಜಿ ನಡುಗುಡ್ಡೆ, ಶೇಕ್ ಹಾಜಿ ಬನಾರಿ , ಅಬ್ಬಾಸ್ ಏರಿಮಾರ್ , ಉಸ್ಮಾನ್ ಕೂಂಕ್ಯ , ಇಬ್ರಾಹಿಂ ಪಾರೆ, ಸುಲೈಮಾನ್ ನಡುಗುಡ್ಡೆ, ನವಾಝ್ ಸಖಾಫಿ, ಬೆಳಂದೂರು, ಇಸ್ಮಾಯಿಲ್ ಮುಸ್ಲಿಯಾರ್ ಗುಂಡಿನಾರ್,ಅಬ್ದುಲ್ ಅಝೀಝ್ ಅಮ್ಜದಿ ಬನಾರಿ, ಲತೀಫ್ ಕೂಂಕ್ಯ, ಅಬೂಬಕ್ಕರ್ ಫಾಳಿಲಿ, ಫಾರೂಕ್ ಬೊಳ್ಯಮೂಲೆ, ಯೂಸುಫ್ ಸಖಾಫಿ ದೇವಸ್ಯ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here