ಎಂ.ಎಸ್ಸಿ ಇನ್‌ಫ್ರೂಟ್ ಸೈನ್ಸ್ ನಲ್ಲಿ ಕೆಮ್ಮಾಯಿ ಶ್ರೀನಿಧಿ ಎಂ.ಬಿ. ಚಿನ್ನದ ಪದಕ

0

ಪುತ್ತೂರು: ಉತ್ತರಪ್ರದೇಶದ ಝಾನ್ಸಿ ರಾಣಿಲಕ್ಷ್ಮೀ ಬಾಯಿ ಸೆಂಟ್ರಲ್ ಅಗ್ರಿಕಲ್ಚರಲ್ ಯೂನಿವರ್ಸಿಟಿಯ ಎಂ.ಎಸ್ಸಿ ಇನ್‌ಫ್ರೂಟ್ ಸೈನ್ಸ್ ವಿಭಾಗದಲ್ಲಿ ಶ್ರೀನಿಧಿ ಎಂ.ಬಿ.ರವರು ಚಿನ್ನದ ಪದಕ ಪಡೆದಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ನಡೆದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಸಚಿವ ನರೇಂದ್ರ ಸಿಂಗ್ ಥೋಮರ್ ಚಿನ್ನದ ಪದಕ ಪ್ರದಾನ ಮಾಡಿದರು.

ಶ್ರೀನಿಧಿ ಎಂ.ಬಿ.ರವರು ಮೈಸೂರು ಕಾಲೇಜ್ ಆಫ್ ಹಾರ್ಟಿಕಲ್ಚರ್‌ನಲ್ಲಿ ತೋಟಗಾರಿಕಾ ಪದವಿ ಪಡೆದಿದ್ದ ಇವರು ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ಇಂದ್ರಪಸ್ಥ ವಿದ್ಯಾಲಯ ಉಪ್ಪಿನಂಗಡಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಇವರು ಕೆಮ್ಮಾಯಿ ಮೇಘನಿಧಿ ನಿವಾಸಿ ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕ ದಿ. ಎಂ.ಬೆಳಿಯಪ್ಪ ಗೌಡ, ಹಾಗೂ ಬಡಗನ್ನೂರು ಕೊಯಿಲ ಶಾಲೆ ಶಿಕ್ಷಕಿ ಪುಷ್ಪಾವತಿ ಎಂ.ಬಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here