ನೆಲ್ಯಾಡಿ: ಸುರಕ್ಷಾ ಸೂಪರ್ ಮಾರ್ಕೆಟ್‌ನ ಲಕ್ಕೀ ಗಿಫ್ಟ್ ಸ್ಕೀಮ್ ಬಂಪರ್ ಬಹುಮಾನ ಡ್ರಾ

0

ನೆಲ್ಯಾಡಿ: ಇಲ್ಲಿನ ಶಿಲ್ಪ ಕಾಂಪ್ಲೆಕ್ಸ್‌ನಲ್ಲಿರುವ ಸುರಕ್ಷಾ ಸೂಪರ್ ಮಾರ್ಕೆಟ್‌ನ ಲಕ್ಕಿ ಗಿಫ್ಟ್ ಸ್ಕೀಮ್‌ನ ಬಂಪರ್ ಬಹುಮಾನದ ಡ್ರಾ ಇತ್ತೀಚೆಗೆ ಸಂಸ್ಥೆಯ ಮಳಿಗೆಯಲ್ಲಿ ನಡೆಯಿತು.


ಶ್ಯಾಮಲಾ ಶಿವಣ್ಣ ಹೆಗ್ಡೆ ಹಾಗೂ ಬೇಬಿ ಪುಣ್ಯಶ್ರೀ ಮುದಳೆ ಅವರು ಡ್ರಾ ನಡೆಸಿಕೊಟ್ಟರು. ಬಂಪರ್ ಬಹುಮಾನ ಜುಪಿಟರ್ ಕ್ಲಾಸಿಕ್ ದ್ವಿಚಕ್ರ ವಾಹವನ್ನು ಭೀಮ್ ಶಶಿಕಲಾ ಭಟ್ ಈನಡ್ಕರವರು ಪಡೆದುಕೊಂಡರು. ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಶಿಲ್ಪ ಕಾಂಪ್ಲೆಕ್ಸ್ ಮಾಲಕ ಶಿವಣ್ಣ ಹೆಗ್ಡೆ, ಸುಮನಾ ದೋಂತಿಲ, ನಮಿತಾ ಶೆಟ್ಟಿ ಸುನೀತ ಟೈಲರ್, ಜ್ಯೋತಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತಿಸಿ ಮಾತನಾಡಿದ ಸುರಕ್ಷಾ ಸೂಪರ್ ಮಾರ್ಕೆಟ್‌ನ ರವಿಕುಮಾರ್, ಲಕ್ಕಿ ಗಿಫ್ಟ್ ಸ್ಕೀಮ್‌ನ 2ನೇ ಸ್ಕೀಮ್ ಎ.10ರಿಂದ ಆರಂಭಗೊಳ್ಳಲಿದೆ. 15 ತಿಂಗಳ ಅವಧಿಯ ಸ್ಕೀಮ್ ಇದಾಗಿದ್ದು ಪ್ರತಿ ತಿಂಗಳು ರೂ.500 ಪಾವತಿಸಬೇಕಾಗುತ್ತದೆ. ವಿಜೇತರು 7500 ರೂ.ಬೆಲೆಯ ಗೃಹೋಪಯೋಗಿ ಸಾಮಾಗ್ರಿ ಪಡೆದುಕೊಳ್ಳಬಹುದಾಗಿದೆ. ಬಂಪರ್ ಬಹುಮಾನವಾಗಿ ಬಜಾಜ್ ಬೈಕ್ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

LEAVE A REPLY

Please enter your comment!
Please enter your name here