ಕುಂತೂರು ಕೋಡ್ಲದಲ್ಲಿ ದೈವಗಳ ನೇಮೋತ್ಸವ

0

ಪೆರಾಬೆ: ಕುಂತೂರೂ ಗ್ರಾಮದ ಕೊಡ್ಲ ವಿಶ್ವನಾಥ ಪೂಜಾರಿಯವರ ಮನೆಯಲ್ಲಿ ವರ್ಷಂಪ್ರತಿಯಂತೆ ನಡೆಯುವ ಒರುಂಬೊಡ್ತಿ ದೈವಕ್ಕೆ ನೇಮ, ರಕ್ತೇಶ್ವರಿ, ಗುಳಿಗ ಮತ್ತು ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮ ಮಾ.11ರಂದು ನಡೆಯಿತು.


ಸಂಜೆ ಭಂಡಾರ ತೆಗೆದು ದೈವಗಳಿಗೆ ನೇಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು. ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ರೈ, ರಘುರಾಮ್ ಭಟ್, ಗಣರಾಜ್ ಭಟ್, ಶಿವಕುಮಾರ್ ಭಟ್ ಕೇವಳ, ಗಂಗಾಧರ ಸುವರ್ಣ ನರಿಮೊಗರು, ಕೋಡಿಂಬಾಡಿ ಗ್ರಾ.ಪಂ. ಮಾಜಿ ಸದಸ್ಯ ಸುಂದರ ಸಾಲಿಯಾನ್, ಚಂದ್ರಶೇಖರ ಪೂಜಾರಿ ಅಲಂಕಾರು, ಜನಾರ್ದನ ಶೆಟ್ಟಿ ಸುರುಳಿ, ಕುಂತೂರು ಶಾರದಾ ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ, ರಘು ಶೆಟ್ಟಿ ಸೇರಿದಂತೆ ಹಲವು ಮಂದಿ ನೇಮೋತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here