ಮಾ.28-ಏ.13:ನೆಲ್ಲಿಕಟ್ಟೆಯಲ್ಲಿ ಮಕ್ಕಳಿಗೆ ಬೇಸಗೆ ಶಿಬಿರ

0

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಸಿ.ಎಂ ಫ್ಲಾಝಾದಲ್ಲಿ ಮಾ.28 ರಿಂದ ಏ.13 ರ ವರೆಗೆ ಮಕ್ಕಳಿಗೆ ಬೇಸಗೆ ಶಿಬಿರವು ನಡೆಯಲಿದ್ದು, ಒಂದರಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ದಿನಗಳನ್ನು ಸದುಪಯೋಗಪಡಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.


ತರಗತಿ ಅವಧಿ ಬೆಳಿಗ್ಗೆ 10 ರಿಂದ ಸಂಜೆ 3.30 ಆಗಿದ್ದು, ಆರ್ಟ್ ಆಂಡ್ ಕ್ರಾಪ್ಟ್ಸ್, ಮ್ಯಾಥ್ ಟ್ರಿಕ್ಸ್, ಡ್ರಾಯಿಂಗ್, ಮ್ಯಾಜಿಕ್, ಜಿ.ಕೆ, ಗೇಮ್ಸ್, ಸಿಂಗಿಂಗ್, ಡ್ಯಾನ್ಸಿಂಗ್, ಬೇಸಿಕ್ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಗತಿಗೆ ಆಗಮಿಸುವ ವಿದ್ಯಾರ್ಥಿಗಳು ಲಂಚ್ ಅನ್ನು ಮನೆಯಿಂದಲೇ ತರತಕ್ಕದ್ದು, ಇತರೆ ಸಾಮಾಗ್ರಿಗಳನ್ನು ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8861438166 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here