ಪುತ್ತೂರು: ಬಡಗನ್ನೂರು ಗ್ರಾಮದ ಪೆರಿಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಮಾ.25ರಂದು ಅದ್ದೂರಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಉಬ್ಬು ಛಾಯಾಚಿತ್ರ ಮತ್ತು ಹಸಿರು ಹೊರೆಕಾಣಿಕೆಯ ಮೆರವಣಿಗೆ ಆರಂಭಗೊಂಡಿತು. ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತ್ತಡ್ಕ ಮತ್ತು ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಭಜನಾ ಮಂದಿರದ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ಶಾಸ್ತಾರ ಸಿಂಗಾರಿ ಮೇಳ ದೇಲಂಪಾಡಿ ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಗೆ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಸಮಾಪನೆಗೊಂಡಿತು. ಬಳಿಕ ಉಗ್ರಾಣ ಮಹೂರ್ತವನ್ನು ಗಣಪತಿ ಗೌಡ ಕೋಡಿಯಡ್ಕ ಉದ್ಘಾಟಿಸಿದರು. ಶಿವಪ್ರಸಾದ್ ಭಟ್ ಪಟ್ಟೆ ದೀಪ ಬೆಳಗಿಸಿ ಪಾಕಶಾಲೆಯನ್ನು ಉದ್ಘಾಟಿಸಿದರು. ಕಾರ್ಯಾಲಯವನ್ನು ಗಣೇಶ್ ಗೌಡ ಕನ್ನಯ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮ:
ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯನ್ನು ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಭಟ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಷೇತ್ರದ ಅರ್ಚಕರಾದ ರವಿ ಉಳಿಯತ್ತಾಯ, ಅನೂಪ್ ಭಟ್ ಪಟ್ಟೆ, ಬಡಗನ್ನೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಆಳ್ವ ಬಡಗನ್ನೂರು, ಅರಿಯಡ್ಕ ಗ್ರಾ.ಪಂ.ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯಾದ್ಯಕ್ಷ ಚನಿಯಪ್ಪ ನಾಯ್ಕ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಭಂಡಾರತ್ತಡ್ಕ ಇದರ ಅಧ್ಯಕ್ಷ ಗಣೇಶ್ ಭಟ್ ಪಾದಕರ್ಯ, ಶ್ರೀ ಸ್ವಾಮಿ ಕೊರಗಜ್ಜ ಆರಾಧನಾ ಸಮಿತಿ ಪಾಪೆಮಜಲು ಇದರ ಅಧ್ಯಕ್ಷ ಬಾಬು ಪಾದಲಾಡಿ, ಪ್ರಗತಿಪರ ಕೃಷಿಕ ಓಡಿಯಪ್ಪ ಗೌಡ ಆಲಂತ್ತಡ್ಕ, ಬಡಗನ್ನೂರು ಗ್ರಾ.ಪಂ. ಸದಸ್ಯ ಲಿಂಗಪ್ಪ ಗೌಡ ಮೋಡಿಕೆ, ಹೇಮಾವತಿ ಮುಂಡೋಲೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ ಉಪಸ್ಥಿತರಿದ್ದರು. ಪುತ್ತೂರು ನೋಟರಿ ವಕೀಲ ಮಂಜುನಾಥ ಎನ್.ಎಸ್.ಅಧ್ಯಕ್ಷತೆ ವಹಿಸಿದ್ದರು. ದಿವಾಕರ್ ನಾಯಕ್, ವಿಜಯ ನಾಯ್ಕ ಹೊಸನಗರ, ಮೋಹನ್ ಗೌಡ ಪೆರಿಗೇರಿ, ಯೋಗೀಶ್ ಆಲಂತಡ್ಕ, ಲಲಿತ ಹೊಸನಗರ, ಅಶೋಕ್ ಗೌಡ ಕನ್ನಯ, ರಾಜು ಪೆರಿಗೇರಿ, ಗಣೇಶ್ ಆಚಾರ್ಯ ಮುಂಡಾಜೆ, ಅಭಿಷೇಕ್ ಕೋಡಿಯಡ್ಕ, ನವೀನ್ ನೆಕ್ಕರೆ, ರಾಜಕುಮಾರ್ ಪೆರಿಗೇರಿ, ಉದಯ ನಾಯ್ಕ ಪೆರಿಗೇರಿ ಮತ್ತು ಜಯಶೀಲ ಪೆರಿಗೇರಿ ಅಥಿತಿಗಳನ್ನು ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಸದಸ್ಯರು, ಆಡಳಿತ ಮಂಡಳಿ ಸಮಿತಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು, ನವಚೈತನ್ಯ ಯುವಕ ಮಂಡಲದ ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಸದಸ್ಯರು ಹಾಗೂ ಊರ ಬಾಂಧವರು ಉಪಸ್ಥಿತರಿದ್ದರು.
ಲಾಸ್ಯ, ಅದ್ವಿತ, ನಿತಿಕಾ ಮತ್ತು ಧಕ್ಷ ಪ್ರಾರ್ಥಿಸಿದರು. ಪ್ರಸಾದ್ ಕನ್ನಯ ಆಲಂತಡ್ಕ ಸ್ವಾಗತಿಸಿದರು. ಅಕ್ಷತಾ ಪೆರಿಗೇರಿ ವಂದಿಸಿದರು. ಪ್ರಸಾದ್ ಆಲಂತಡ್ಕ ಮತ್ತು ಸುಬ್ಬಯ್ಯ ರೈ ಹಲಸಿನಡಿ ಕಾರ್ಯಕ್ರಮ ನಿರೂಪಿಸಿದರು.