ಪುತ್ತೂರು ಶಿವಳ್ಳಿ ಸಂಪದ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ

0

ಪುತ್ತೂರು : ಪುತ್ತೂರು ಶಿವಳ್ಳಿ ಸಂಪದ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಬೊಳುವಾರುವಿನ ನವನೀತ ಸಭಾಂಗಣದಲ್ಲಿ ಮಾ.18ರಂದು ನಡೆಸಲಾಯಿತು.

ಮಹಿಳಾ ದಿನಾಚರಣೆಯ ಕುರಿತು ಡಾ..ಸುಧಾರಾವ್ ,ಶಿವಳ್ಳಿ ಸಂಪದದ ತಾಲೂಕು ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ಸಂದರ್ಭೋಚಿತವಾಗಿ ಮಾತನಾಡಿದರು.

ಬೊಳುವಾರು ವಲಯದ ಅಧ್ಯಕ್ಷೆ ಮಾಲತಿ ನಿಡ್ವಣ್ಣಾಯರು , ದರ್ಬೆ ವಲಯದ ಅಧ್ಯಕ್ಷೆ ವೀಣಾ ತಂತ್ರಿ, ಬೆಳಂದೂರು ವಲಯದ ಅಶ್ವಿನಿ ನಿಡ್ವಣ್ಣಾಯ,ರಾಮಕುಂಜ ವಲಯದ ಉಷಾ ತಂತ್ರಿ, ಪಾಣಾಜೆ ವಲಯದ ಅಮಿತಾ ಕಲ್ಲೂರಾಯ, ವಲಯಗಳ ವರದಿಯನ್ನು ಮತ್ತು ಕಾರ್ಯದರ್ಶಿ ವೀಣಾ ಕೊಳತ್ತಾಯರು ಮಹಿಳಾ ಸಂಪದದ ವರದಿ ವಾಚನ ಮಾಡಿದರು. ವಾಚಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಡಾ.ಸುಧಾ, ಪಾಕತಜ್ಞೆ ಸುಜಾತ ಕಜೆ, ಸಾಮಾಜಿಕ ಕ್ಷೇತ್ರದಲ್ಲಿ ಪ್ರೇಮಲತಾ ರಾವ್, ಅವರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮವನ್ನು ಅಹಲ್ಯೆ ಪ್ರಾರ್ಥಿಸಿ,ಮಹಿಳಾ ಸಂಪದದ ಅಧ್ಯಕ್ಷೆ ಪ್ರೇಮಲತಾ ರಾವ್ ಸ್ವಾಗತಿಸಿ, ಪ್ರತಿಭಾ ಓಕುಣ್ಣಾಯ ವಂದಿಸಿ, ಗೌರವ ಅಧ್ಯಕ್ಷೆ ವತ್ಸಲರಾಜ್ಞಿ ಕಾ‌ರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here