








ಪುತ್ತೂರು: ಕಾವುನಲ್ಲಿ ಗ್ರಾಮ ಪಂಚಾಯತ್ ನೀರು ಪೂರೈಕೆಯ ಸಿಮೆಂಟ್ ಟಾಂಕಿಯ ಒಳಗಡೆ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.





ಮಾಡ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿರುವ, ಗ್ರಾಮ ಪಂಚಾಯತ್‌ನ ನೀರು ಸರಬರಾಜಿನ ಸಿಮೆಂಟ್ ಟಾಂಕಿಯ ಒಳಗಡೆ ಶವ ಪತ್ತೆಯಾಗಿದೆ.ಪರಿಸರದಲ್ಲಿ ದುರ್ನಾತ ಬೀರುತ್ತಿದ್ದುದರಿಂದ ಸ್ಥಳೀಯರು ಸಂಶಯಗೊಂಡು ಟಾಂಕಿಯನ್ನು ನೋಡಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಗಂಡಸಿನ ಶವ ಪತ್ತೆಯಾಗಿದೆ.
ಟಾಂಕಿನ ಮೇಲಿನ ಭಾಗದಲ್ಲಿ ಕೇಸರಿ ಬಣ್ಣದ ಲುಂಗಿಯೊಂದು ಪತ್ತೆಯಾಗಿದೆ.ಟಾಂಕಿಯ ಒಳಗಡೆ ಸ್ವಚ್ಛ ಮಾಡಲೆಂದು ಇಳಿಯಲು ಉಪಯೋಗಿಸುತ್ತಿದ್ದ ಏಣಿ ನಾಪತ್ತೆಯಾಗಿದೆ.

ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಇನ್ನಷ್ಟೆ ಸ್ಥಳಕ್ಕೆ ಬರಬೇಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.








