ಬೆಟ್ಟಂಪಾಡಿ ದೇವಾಲಯದಲ್ಲಿ ನಿರ್ಮಾಣಗೊಳ್ಳಲಿದೆ ಅತ್ಯಾಕರ್ಷಕ ‘ಕಲ್ಯಾಣಿ’ – ಅಭಿವೃದ್ಧಿ ಕಾಮಗಾರಿಗೆ ನಡೆಯಿತು ಗುದ್ದಲಿ ಪೂಜೆ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳ ಮುಂದಿನ ಹಂತವಾಗಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಬೆಟ್ಟಂಪಾಡಿ ಗ್ರಾ.ಪಂ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವಿನೊಂದಿಗೆ ಅತ್ಯಾಕರ್ಷಕವಾಗಿ ದೇವಳದ ಕೆರೆ ‘ಕಲ್ಯಾಣಿ’ ಅಭಿವೃದ್ಧಿಗೊಳ್ಳಲಿದೆ.

ಕಾಮಗಾರಿಯ ಗುದ್ದಲಿ ಪೂಜೆ ಮಾ. 24ರಂದು ದೇವಾಲಯದ ವಠಾರದಲ್ಲಿ ನಡೆಯಿತು. ದೇವಳದ ಅರ್ಚಕ ವೆಂಕಟ್ರಮಣ ಭಟ್ ರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಪುತ್ತೂರು ತಾಲೂಕು ಪಂಚಾಯತ್ ಮನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.

ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಆಡಳಿತ ಸಮಿತಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ರೈ, ಸದಸ್ಯರುಗಳಾದ ಪಾರ್ವತಿ ಗೌಡ, ಗಂಗಾಧರ ಎಂ.ಎಸ್., ಸುಮಲತಾ, ಮಹೇಶ್ ಕೆ., ರಮ್ಯ, ಗುತ್ತಿಗೆದಾರ ನವೀನ್ ಕುಮಾರ್, ಶಿವಕುಮಾರ್ ಬಲ್ಲಾಳ್, ಡಾ. ಸುಬ್ರಹ್ಮಣ್ಯ ವಾಗ್ಲೆ, ಶೇಷಪ್ಪ ರೈ ಮೂರ್ಕಾಜೆ, ಸತೀಶ್ ರೈ ಮೂರ್ಕಾಜೆ, ದುರ್ಗಾಪ್ರಸಾದ್ ಜೆ., ರಮೇಶ್ ಬಳ್ಳಿತ್ತಡ್ಡ, ಜಗದೀಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಯೋಜಿತ ಕಲ್ಯಾಣಿಯ ನೀಲ ನಕಾಶೆಯನ್ನು ಬೆಟ್ಟಂಪಾಡಿ ಗ್ರಾ.ಪಂ. ವತಿಯಿಂದ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರವರಿಗೆ ಹಸ್ತಾಂತರಿಸಲಾಯಿತು. ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಲ್ಯಾಣಿಯು ದೇವಳದ ಮುಂಭಾಗದಲ್ಲಿ ಅತ್ಯಂತ ಸುಂದರವಾಗಿ ಮೂಡಿಬರಲಿದೆ. ಅಭಿವೃದ್ಧಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ’ ಎಂದು ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದರು.

LEAVE A REPLY

Please enter your comment!
Please enter your name here