ಟೈಮ್ಸ್‌ ಗ್ರೂಪ್‌ ʻಬೆಸ್ಟ್‌ ಎಜ್ಯುಕೇಶನಲ್‌ ಬುಕ್ಸ್‌ ಸಪ್ಲೈʼ ಪ್ರಶಸ್ತಿಗೆ ಬುಕ್ಸ್‌ & ಸ್ಟೇಷನರಿ ದಿಗ್ಗಜ ಎಸ್‌ಎಲ್‌ವಿ ಗ್ರೂಪ್‌ ಭಾಜನ

0

ವಿಟ್ಲ : ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರ ಮಾಲಕತ್ವದ ಎಸ್‌ಎಲ್‌ವಿ ಗ್ರೂಪ್‌ ಬುಕ್ಸ್‌ & ಸ್ಟೇಷನರಿ ಪೂರೈಕೆಯ ವಿಭಾಗದಲ್ಲಿ ಟೈಮ್ಸ್‌ ಗ್ರೂಪ್‌ ನೀಡುವ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯಲ್ಪ ಅವಧಿಯಲ್ಲಿ ಬಹಳಷ್ಟು ಎತ್ತರಕ್ಕೆ ಏರಿದ ಸಂಸ್ಥೆಗಳ ಪೈಕಿ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಪುಸ್ತಕ ಮಾರಾಟ ಸಂಸ್ಥೆಯೂ ಒಂದಾಗಿದ್ದು, ಎಲ್ಲರ ಅಚ್ಚುಮೆಚ್ಚಿನ ಎಸ್.ಎಲ್.ವಿ.ಬುಕ್ಸ್ ಆಗಿ ಹೆಸರುವಾಸಿಯಾಗಿದೆ.

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ನೇರ್ಲಾಜೆಯ ದಿ. ರಾಮದಾಸ್ ಹಾಗೂ ದಿ.ಸುಂದರಿ ರಾಮದಾಸ್ ರವರ ಪುತ್ರರಾಗಿ ಜನಿಸಿದ ದಿವಾಕರ್ ದಾಸ್ ರವರು ತಮ್ಮ ಶಾಲಾ ಶಿಕ್ಷಣವನ್ನು ವಿಟ್ಲದಲ್ಲಿ ಪೂರೈಸಿ ಕಾಲೇಜು ಶಿಕ್ಷಣವನ್ನು ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಉದ್ಯಮಿಯಾಗುವ ಕನಸು ಹೊತ್ತು ಹೊರಟ ಅವರು ಮೈಸೂರಿಗೆ ಬಂದು ಪುಸ್ತಕ ಪೂರೈಕೆಯ ಸಣ್ಣ ಉದ್ಯಮವನ್ನು ಪ್ರಾರಂಭಿಸಿದರು ಮತ್ತು ಎಸ್‌ಎಲ್‌ವಿ ಬುಕ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಆ ಬಳಿಕದ ದಿನಗಳಲ್ಲಿ ಎಸ್‌ಎಲ್‌ವಿ ಗ್ರೂಪ್‌ನ ಅಡಿಯಲ್ಲಿ ಅವರು ಹಲವಾರು ಸಹಸಂಸ್ಥೆಗಳನ್ನು ಹುಟ್ಟುಹಾಕುತ್ತಾ ಮುನ್ನಡೆದರು.‌

ಎಸ್.ಎಲ್.ವಿ ಬುಕ್ ಏಜೆನ್ಸಿ:

2010 ರಲ್ಲಿ 2 ಜನರ ಉದ್ಯೋಗಿಗಳೊಂದಿಗೆ ಪ್ರಾರಂಭವಾದ‌ ಸಂಸ್ಥೆ ಇಂದು 120 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ. ಸಂಸ್ಥೆಯು ಮೈಸೂರು, ಮಡಿಕೇರಿ, ಮಂಗಳೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಪೂರೈಸುತ್ತಿದೆ. ಒಂದು ದಶಕದಲ್ಲಿ ಎಸ್.ಎಲ್.ವಿ. ಕರ್ನಾಟಕದ ಸುಮಾರು 700 ಕ್ಕೂ ಹೆಚ್ಚು ಶಾಲೆಗಳಿಗೆ ಪ್ರಮುಖ ಪೂರೈಕೆದಾರರಲ್ಲಿ ಒಂದಾಯಿತು. ಎಸ್.ಎಲ್.ವಿ. ಬುಕ್ ಏಜೆನ್ಸಿಗಳು ಈ ಪ್ರದೇಶದ ಎಲ್ಲಾ ಪ್ರಮುಖ ಶಾಲೆಗಳಿಗೆ ಸರಬರಾಜು ಮಾಡುತ್ತಿರುವುದರೊಂದಿಗೆ ತನ್ನ ವ್ಯವಹಾರವನ್ನೂ ವಿಸ್ತಾರಗೊಳಿಸಿದೆ.

ಮಂಗಳೂರಿನಲ್ಲಿ ಪ್ರಥಮ ಚಿಲ್ಲರೆ ಮಾರಾಟ ಮಳಿಗೆ ಆರಂಭ:

2017 ರಲ್ಲಿ ಗ್ರೂಪ್ ತನ್ನ ಮೊದಲ ಚಿಲ್ಲರೆ ಮಾರಾಟ ಮಳಿಗೆಯನ್ನು ಮಂಗಳೂರಿನ ಬಿಜೈನಲ್ಲಿ ಪ್ರಾರಂಭಿಸಿತು. ವಿವಿಧ ಬಗೆಯ ಪುಸ್ತಕಗಳು ಒಂದೇ ಕಡೆ ಸಿಗುವಂತಾಗಲು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಿದ ಸಂಸ್ಥೆ ಅತೀ ಕಡಿಮೆ ಅವಧಿಯಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಫಲವಾಯಿತು. ಬಳಿಕದ ದಿನಗಳಲ್ಲಿ ಅವರು ಮೈಸೂರಿನ ಆರ್‌ಆರ್ ನಗರ ಬೆಂಗಳೂರಿನ ಚಾಮರಾಜನಗರ ಹಾಗೂ ವಿದ್ಯಾರಣ್ಯಪುರ ಮತ್ತು ಮಂಗಳೂರಿನಲ್ಲಿ ಇನ್ನೊಂದು ಮಳಿಗೆಗಳನ್ನು ಹುಟ್ಟುಹಾಕುವುದರೊಂದಿಗೆ ತಮ್ಮ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಿತು. ಸಂಸ್ಥೆಯು ತನ್ನ ವ್ಯವಹಾರವನ್ನು ಇನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ತನ್ನ ಚಿಲ್ಲರೆ ಮಾರಾಟ ಮಳಿಗೆಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ.

ವಿದ್ಯಾಭವನ ಪ್ರಕಾಶನ:

ಬಳಿಕದ ದಿನಗಳಲ್ಲಿ ಸಂಸ್ಥೆಯು ವಿದ್ಯಾಭವನ ಎನ್ನುವ ತಮ್ಮದೇ ಆದ ಪ್ರಕಾಶನವನ್ನು ಆರಂಭಿಸಿತು. ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳೊಂದಿಗೆ ಶಾಲೆಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಂಸ್ಥೆ ತನ್ನದೇ ಆದ ಪ್ರಕಾಶನ ಕಂಪನಿಯನ್ನು ಪ್ರಾರಂಭಿಸಿತು. ವಿದ್ಯಾಭವನವು 30 ಕ್ಕೂ ಹೆಚ್ಚು ಶೀರ್ಷಿಕೆಗಳನ್ನು ಪ್ರಕಟಿಸಿದೆ, ಅದು ಇತರ ಪ್ರಕಟಣೆಗಳಲ್ಲಿ ಜನಪ್ರಿಯವಾಗುತ್ತಿದೆ. ಕಂಪನಿಯು ಭಾರತದಾದ್ಯಂತ ತಮ್ಮ ವ್ಯವಹಾರವನ್ನು ವಿಸ್ತರಿಸುವತ್ತ ಗಮನ ಹರಿಸುತ್ತಿದೆ.

ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ.:

ಎಸ್‌ಎಲ್‌ವಿ ಮೈಸೂರಿನಲ್ಲಿ ಗಣನೀಯ ಪ್ರಮಾಣದ ನೋಟ್ ಬುಕ್ ಉತ್ಪಾದನಾ ಘಟಕ ಹೊಂದಿದ್ದು, ಒಂದು ಫೀಡ್‌ನೊಂದಿಗೆ ದಿನಕ್ಕೆ ಸುಮಾರು 60,000 ಪುಸ್ತಕಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿದೆ. ಇದು ಎಲ್ಲಾ ರೀತಿಯ ನೋಟ್‌ಬುಕ್‌ಗಳು, ರೆಕಾರ್ಡ್, ಉತ್ತರ ಪತ್ರಿಕೆಗಳು, ಎ4 ಶೀಟ್‌ಗಳು ಮತ್ತು ಇತರ ಕಾಗದದ ಉತ್ಪನ್ನಗಳನ್ನು ತಮ್ಮದೇ ಬ್ರಾಂಡ್ ‘ವೈಟ್ ಸ್ಪೇಸ್’ ಹೆಸರಿನಲ್ಲಿ ತಯಾರಿಸುತ್ತಿದೆ.

ʻವೈಟ್ ಸ್ಪೇಸ್’ ನೋಟ್ ಬುಕ್:
ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ʻವೈಟ್ ಸ್ಪೇಸ್’ ಎನ್ನುವ ವಿನೂತನ ನೋಟ್ ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ‌. ಅದು ಕೂಡ ಅತ್ಯಲ್ಪ ಅವಧಿಯಲ್ಲಿ ಬಹುಬೇಡಿಕೆಯ ನೋಟ್ ಬುಕ್ ಗಳ ಸಾಲಿಗೆ ಸೇರಿದೆ.

ಎಸ್.ಎಲ್.ವಿ‌. ಕಲರ್ಸ್:

ದಿವಾಕರ್ ದಾಸ್ ರವರು ಪುಸ್ತಕದ ಉದ್ಯಮದೊಂದಿಗೆ ಚಲನಚಿತ್ರೋದ್ಯಮಕ್ಕೂ ತಮ್ಮ ಚಿತ್ತವನ್ನು ಹರಿಸುತ್ತಿದ್ದಾರೆ. ಎಸ್‌ಎಲ್‌ವಿ ಕಲರ್ಸ್ ಹೆಸರಿನ ತಮ್ಮ ಬ್ಯಾನರ್ ನ ಅಡಿಯಲ್ಲಿ ಎರಡು ಚಲನ ಚಿತ್ರಗಳು ನಿರ್ಮಾಣ ಮಾಡಿದ್ದಾರೆ. ಈ ಪೈಕಿ ಒಂದು ಚಲನಚಿತ್ರವು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದ್ದು, ಇನ್ನೊಂದು ಚಿತ್ರ ನಿರ್ಮಾಣ ಹಂತದಲ್ಲಿದೆ.

ಟೈಮ್ಸ್ ಗ್ರೂಪ್‌ ಅವಾರ್ಡ್ -2023
ದಿವಾಕರ್ ದಾಸ್ ರವರ ಸಾಮಾಜಿಕ‌ ಕಳಕಳಿಯ ಕೆಲಸಗಳಿಗೆ ಹಾಗೂ ಸಂಸ್ಥೆಯ ವ್ಯವಹಾರಕ್ಕಾಗಿ ಹಲವು ವೇದಿಕೆಗಳಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಈ ಭಾರಿ ಟೈಮ್ಸ್ ಗ್ರೂಪ್ ನಿಂದ ಕೊಡಲ್ಪಡುವ ಪ್ರತಿಷ್ಠಿತ ʻಬೆಸ್ಟ್ ಎಜ್ಯುಕೇಶನಲ್ ಬುಕ್ ಸಪ್ಲೈ ಅವಾರ್ಡ್’ ದಿವಾಕರ್ ದಾಸ್ ರವರ ಮಾಲಕತ್ವದ ಸಂಸ್ಥೆಗೆ ಲಭಿಸಿದೆ. ಟೈಮ್ಸ್ ಗ್ರೂಪ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಂತೆ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಈ ಪ್ರಶಸ್ತಿ ಲಭಿಸಿದೆ.

ಸಾಮಾಜಿಕ ಉದಾರಿ ದಿವಾಕರ ದಾಸ್
ದಿವಾಕರ್ ದಾಸ್ ಅವರು ತನ್ನ ಉದ್ಯಮದೊಂದಿಗೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಊರಿನಲ್ಲಿ ಶಾಲೆಗೆ ಕಟ್ಟಡ ನಿರ್ಮಿಸಿ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆರ್ಥಿಕ ನೆರವು, ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ, ಹಲವು ಟ್ರಸ್ಟ್ ಗಳ ಮುಖಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಪುಸ್ತಕ ವಿತರಣೆ, ಅನೇಕ ದೇವಾಲಯ-ಮಂದಿರಗಳ ಅಭಿವೃದ್ಧಿಗೆ ಸಹಾಯ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿರಂತರವಾಗಿ ಸಹಕಾರ ನೀಡುವುದರೊಂದಿಗೆ ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳು ನಿತ್ಯ ನಿರಂತರವಾಗಿ ಇವರಿಂದ ಮಾಡಲ್ಪಡುತ್ತಿದೆ.

LEAVE A REPLY

Please enter your comment!
Please enter your name here