ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ವಿವಿಧ ನೇಮಕಾತಿಗಳಿಗೆ ಆಯ್ಕೆಯಾಗಿರುವ ಮತ್ತು ಪ್ರವೇಶಾತಿ ಪರೀಕ್ಷೆಗಳನ್ನು ಪಾಸು ಮಾಡಿರುವ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಂಗಳೂರು ಕೆಎಂಎಫ್ ನ ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ ರವರು ನೇಮಕಾತಿಗಳಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಸನ್ಮಾನಿಸಿ, ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮತ್ತು ಸಾಮೂಹಿಕ ಅಧ್ಯಯನದ ಮುಖಾಂತರ ನಿಶ್ಚಿತ ಗುರಿಯನ್ನು ಸಾಧಿಸಿ ನೇಮಕಾತಿಗಳಲ್ಲಿ ಆಯ್ಕೆಯಾಗಿ ಉತ್ತಮ ಅಧಿಕಾರಿಗಳಾಗಿ ಸಮಾಜಮುಖಿಯಾಗಿ ಬದುಕುವಂತೆ ಸಲಹೆ ನೀಡಿದರು.
ವಿದ್ಯಾಮಾತಾ ಅಕಾಡೆಮಿಯ ಮೂಲಕ ನೂರಾರು ವಿದ್ಯಾರ್ಥಿಗಳು ಭಾರತೀಯ ಸೇನೆ, ಪೊಲೀಸ್, ಅರಣ್ಯ ಇಲಾಖೆ, ಬ್ಯಾಂಕಿಂಗ್, ಇತ್ಯಾದಿ ನೇಮಕಾತಿಗಳಿಗೆ ಆಯ್ಕೆಯಾಗಿದ್ದು ಮುಂದೆಯೂ ಇನ್ನಷ್ಟು ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಆಗಲಿ” ಎಂದು ಶುಭ ಹಾರೈಸಿದರು.
ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಗುರುದೇವ ಕೋ ಆಪರೇಟಿವ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಕಾಂ ಪದವೀಧರೆ ನಾರಣಪ್ಪ ಕುಸುಮ ದಂಪತಿಯ ಪುತ್ರಿ ನೇರಳಕಟ್ಟೆ ನಿವಾಸಿ ಪೂರ್ಣಿಮಾ, ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪುಂಜಾಲಕಟ್ಟೆ ನಿವಾಸಿ ಸದಾನಂದ ಬಂಗೇರ ಸುಮತಿ ದಂಪತಿಯ ಪುತ್ರಿ ರಕ್ಷಿತಾ.ಯು, ಸೈನಿಕ ಶಾಲೆಯ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪುತ್ತೂರು ತಾಲ್ಲೂಕು ಪಡ್ನೂರು ಗ್ರಾಮದ ಪಡ್ಡಾಯೂರಿನ ರಾಧಾಕೃಷ್ಣ.ಬಿ ಮತ್ತು ಹರ್ಷಿತಾ ದಂಪತಿಯ ಪುತ್ರಿ ಸುದಾನ ಶಾಲೆಯ ವಿದ್ಯಾರ್ಥಿನಿ ಹೃತ್ವಿಕಾ.ಆರ್.ನಾೖಕ್, ಭಾರತೀಯ ಅಂಚೆ ಇಲಾಖೆಯ ನೇಮಕಾತಿಯಲ್ಲಿ ಆಯ್ಕೆಯಾದ ಏನಾಜೆ ನಿವಾಸಿ ರಾಮಣ್ಣ ಪೂಜಾರಿ ಮತ್ತು ಬೇಬಿ ದಂಪತಿಯ ಪುತ್ರಿ ಶ್ರೀನಿಧಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್. ಬಿ ಜಯರಾಮ ರೈರವರನ್ನು ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾದ ಭಾಗ್ಯೇಶ್.ರೈ ರವರು ಮತ್ತು ತರಬೇತುದಾರರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.