ಎ.22-ಎ.24: ಪಾಲ್ತಾಡಿ ಚಾಕೋಟೆತ್ತಡಿ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ, ಆಮಂತ್ರಣ ಬಿಡುಗಡೆ

0

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು,ಇದರ ಆಮಂತ್ರಣವನ್ನು ದೈವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ಸಂಜೀವ ಗೌಡ, ಉಪಾಧ್ಯಕ್ಷರಾದ ವಿಠಲ ಶೆಟ್ಟಿ ಗುತ್ತಿನಮನೆ, ಸೀತಾರಾಮ ರೈ ಕಲಾಯಿ, ಪ್ರವೀಣ್ ರೈ ನಡುಕೂಟೇಲು,

ಕಾರ್ಯದರ್ಶಿ ವಿನಯಚಂದ್ರ ಕೆಳಗಿನ ಮನೆ, ಜತೆ ಕಾರ್ಯದರ್ಶಿ ವಿದ್ಯಾಧರ ಗೌಡ ಪಾರ್ಲ, ವಿನೋದ್ ರೈ ಪಾಲ್ತಾಡಿ ಗುತ್ತಿನಮನೆ, ದೈವಸ್ಥಾನಕ್ಕೆ ಸಂಬಂಧಪಟ್ಟ ಆರು ಮನೆಯ ಪ್ರಮುಖರು, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗುರುಕಿರಣ್ ಬೊಳಿಯಾಲ, ಸವಣೂರು ಗ್ರಾ.ಪಂ.ಸದಸ್ಯ ತಾರನಾಥ ಬೊಳಿಯಾಲ, ಜಗದೀಶ್ ಆಚಾರ್ಯ ಪಾರ್ಲ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here