ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ತಳಭಾಗದ ಭೂಗರ್ಭದಲ್ಲಿ ನೀಲಿ, ಬಿಳಿ ಬಣ್ಣ ಮಿಶ್ರಿತ ಹುಡಿ ಪತ್ತೆ !

0

ಪುತ್ತೂರು:ಪುನರ್‌ನಿರ್ಮಾಣದ ವೇಳೆ ಹಲವು ವಿಸ್ಮಯಗಳಿಗೆ ಕಾರಣವಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿರುವುದು ಬೆಳಕಿಗೆ ಬಂದಿದೆ.


ದೇವಳದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿದ್ದು, ಮಾ.27ರಂದು ಬೆಳಿಗ್ಗೆ ಕೆರೆಯ ಮಧ್ಯ ಭಾಗದ ಕಟ್ಟೆಯ ಸುತ್ತ ಕಾಫರ್ ಡ್ರಾಜ್ ಮಾಡಿ ಒಳಗಿನ ನೀರನ್ನು ಹೊರತೆಗೆದಾಗ ವರುಣ ದೇವರ ವಿಗ್ರಹ ಬೆಳಕಿಗೆ ಬಂದಿತ್ತು. ಅದಾದ ಬಳಿಕ ರಾತ್ರಿ ಕಟ್ಟೆಯ ನಾಲ್ಕು ಸ್ಥಂಭಗಳನ್ನು ತೆರವು ಮಾಡಿ ಶಿಲಾಮಯ ಸ್ಥಂಭಗಳನ್ನು ಇಡಲು ಆಳವಾದ ಗುಂಡಿಯನ್ನು ತೋಡುವಾಗ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಪತ್ತೆಯಾಗಿದೆ.ಈ ಹುಡಿ ನೀರಿನಿಂದ ಒದ್ದೆಯಾಗಿ ಅಂಟು ಮಾದರಿಯಲ್ಲಿದ್ದು, ನೋಡುವಾಗ ವಿಶೇಷತೆಯನ್ನು ಕಂಡಿದೆ. ಸಾಮಾನ್ಯವಾಗಿ ಕೆಸರು ಮಣ್ಣು, ಸೇಡಿ ಮಣ್ಣು ಸಿಗುವುದು ಸಾಮಾನ್ಯ ಆದರೆ ಇಲ್ಲಿ ಅಂಟು ಹುಡಿ ಪತ್ತೆಯಾಗಿದೆ.ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದವು. ಇದೀಗ ಪುಷ್ಕರಣಿಯ ಭೂಗರ್ಭದಲ್ಲಿ ನೀಲಿ ಬಿಳಿ ಬಣ್ಣದ ಹುಡಿ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.

ವಿಶೇಷತೆ ಹೊಂದಿದೆ
ಭೂಗರ್ಭವನ್ನು ಆಳವಾಗಿ ತೋಡುವಾಗ ಕಲ್ಲು ಮಿಶ್ರಿತ ಮಣ್ಣು ಸಿಗುತ್ತದೆ.ಆದರೆ ಈ ಹುಡಿಯಲ್ಲಿ ಸ್ವಲ್ಪವೂ ಕಲ್ಲು ಮರಳು ಇಲ್ಲ.ಮೆತ್ತನೆಯ, ಯಾವ ಆಕಾರವನ್ನೂ ಹೋಳದ ಅಂಟು ಮಾದರಿಯ ಹುಡಿಯಾಗಿದೆ.ಈ ಅಂಟು ಹುಡಿ ಒಣಗಿದರೆ ನೈಸ್ ಹುಡಿಯಾಗಿರುತ್ತದೆ-
ಪಿ.ಜಿ.ಜಗನ್ನಿವಾಸ ರಾವ್, ವಾಸ್ತು ಇಂಜಿನಿಯರ್

LEAVE A REPLY

Please enter your comment!
Please enter your name here